ವಿಜಯನಗರ : ಕ್ಷುಲ್ಲಕ ಕಾರಣದ ಜಗಳ, ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ವರದಾಪುರ ಹೊರವಲಯದಲ್ಲಿ ಈ ಘಟನೆ ಸಂಭವಿಸಿದ್ದು, ಹುಳ್ಳಿ ಚೆನ್ನಪ್ಪ (28) ಕೊಲೆಯಾದ ವ್ಯಕ್ತಿ, ಹುಳ್ಳಿ ರಮೇಶ್( 32) ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ, ದನಕಾಯೋ ವಿಚಾರಕ್ಕೆ ಮಾತಿಗೆ ಮಾತು ಬೆಳದು ಗಲಾಟೆ, ಕೈ ಗೆ ಕೈ ಮಿಲಾಯಿಸಿವುಹ ಹಂತಕ್ಕೆ ಹೋಗಿ ಕೊನೆಗೂ ಕೊಲೆಯಲ್ಲಿ ಅಂತ್ಯ ಕಂಡಿದೆ, ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.