ಕೇಂದ್ರ ಕಾರಾಗೃಹಕ್ಕೆ ಉಪಲೋಕಾಯುಕ್ತರ ಭೇಟಿ

0
27

ಕಲಬುರಗಿ: ಕಲಬುರಗಿ ಸೆಂಟ್ರಲ್ ಜೈಲಿಗೆ ಬೆಳ್ಳಂಬೆಳಗ್ಗೆ ಉಪಲೋಕಾಯುಕ್ತರ ಭೇಟಿ ನೀಡಿದ್ದಾರೆ.
ಉಪಲೋಕಾಯುಕ್ತ ನ್ಯಾ ಬಿ ವೀರಪ್ಪ ಭೇಟಿ ನೀಡಿ ಪರಿಶೀಲಿಸಿದ್ದು, ನಗರ ಹೊರವಲಯದ ಸೀತನೂರ ಗ್ರಾಮದ ಬಳಿ ಇರುವ ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ್ದಾರೆ. ಕಾರಾಗೃಹದ ಪ್ರತಿಯೊಂದು ಸೆಲ್, ಬ್ಯಾರಕ್‌ಗಳನ್ನ ಪರಿಶೀಲಿಸಿದಲ್ಲದೆ, ಅಡುಗೆ ಕೋಣೆಗೆ ತೆರಳಿ ಊಟ ಮಾಡಿ ಗುಣಮಟ್ಟ ಪರಿಶೀಲಿಸಿದರು. ಅಲ್ಲದೆ ಕೈದಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಕುಂದು‌ ಕೊರತೆ ಆಲಿಸಿದ್ದಾರೆ. ಸಿಟಿ ಪೊಲೀಸ್ ಕಮಿಷನರ್ ಡಾ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಜೈಲ್ ಸೂಪರಿಂಟೆಂಡೆಂಟ್ ಡಾ ಅನೀತಾ ಸಾಥ್ ನೀಡಿದ್ದಾರೆ.

Previous articleಹುಬ್ಬಳ್ಳಿ: ಮಾರ್ಗ ಬದಲಾವಣೆ
Next articleಬಾಲಕಿ ಚುಡಾಯಿಸಿದ ಐವರು ಯುವಕರ ಬಂಧನ