ಕರಾವಳಿಯಲ್ಲಿ ಮೊದಲ ಎಂ-ಪಾಕ್ಸ್ ವೈರಾಣು ಪ್ರಕರಣ ಪತ್ತೆ

0
32

ಮಂಗಳೂರು: ಕರಾವಳಿಯಲ್ಲಿ ಮೊದಲ ಎಂ-ಪಾಕ್ಸ್ ವೈರಾಣು ಪ್ರಕರಣ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ 40 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದ್ದು, ವ್ಯಕ್ತಿಯಲ್ಲಿ ಎಂ ಪಾಕ್ಸ್ ವೈರಾಣು ಇರುವುದನ್ನು ಪುಣೆಯ ರಾಷ್ಟ್ರೀಯ ವೈರಸಾಲಯ ಸಂಸ್ಥೆ (NIV) ದೃಢಪಡಿಸಿದೆ.
ಕಳೆದ 19 ವರ್ಷಗಳಿಂದ ದುಬೈನಲ್ಲಿ ವಾಸವಾಗಿರುವ ವ್ಯಕ್ತಿ ಜ. 17ರಂದು ಮಂಗಳೂರಿಗೆ ಆಗಮಿಸಿದ್ದರು. ಅವರಲ್ಲಿ‌ ಜ್ವರ ಹಾಗೂ ಚರ್ಮದ ಮೇಲೆ ಗುಳ್ಳೆಗಳಿರುವ ಲಕ್ಷಣ ಪತ್ತೆಯಾಗಿತ್ತು.
ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಸೊಂಕಿನ ಲಕ್ಷಣ ಪತ್ತೆಯಾಗಿದ್ದು, ತಕ್ಷಣ ಮಂಗಳೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಸೊಂಕಿತ ವ್ಯಕ್ತಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವ್ತಕಿಯ ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಪತ್ನಿಯನ್ನು ಐಸೋಲೇಷನ್‌ನಲ್ಲಿಟ್ಟು ನಿಗಾವಹಿಸಲಾಗಿದೆ. ಸದ್ಯ ಸೊಂಕಿತ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ. ಶಂಕಿತ ವ್ಯಕ್ತಿಯ ರಕ್ತ, ಮೂತ್ರ ಹಾಗೂ ಗುಳ್ಳೆಯ ದ್ರವದ ಮಾದರಿ ಬೆಂಗಳೂರು ಮೆಡಿಕಲ್ ಕಾಲೇಜ್(BMC) ಮತ್ತು ಪುಣೆಯ NIVಗೆ ಕಳುಹಿಸಲಾಯಿತು.

Previous article10 ಕೋಟಿ ಜನರಿಂದ ಪವಿತ್ರ ಸ್ನಾನ
Next articleಇಂದು ಜನಿಸುವ ಹೆಣ್ಣುಮಕ್ಕಳಿಗೆ‌ ವಿಶೇಷ ಉಡುಗೊರೆಗೆ ಸೂಚನೆ