ದಾವಣಗೆರೆ: ಶ್ರೀ ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ನಗರದ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಮೆರವಣಿಗೆಗೆ ಮಾಜಿ ಮೇಯರ್ ಹೆಚ್.ಬಿ.ಗೋಣೆಪ್ಪ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರುಗು ನೀಡಿದವು. ನಲ್ಕುದುರೆಯ ಅಣ್ಣಪ್ಪ ಅವರ ವಿನಾಯಕ ಕಹಳೆ ತಂಡ ಆಕರ್ಷಣೀಯವಾಗಿ ಕಹಳೆ ಮೊಳಗಿಸಿದರು.
ಮಹಾನಗರ ಪಾಲಿಕೆ ಸದಸ್ಯರುಗಳಾದ ಜೆ.ಎನ್. ಶ್ರೀನಿವಾಸ್, ಸೌಮ್ಯ ಶ್ರೀನಿವಾಸದ, ಅಹಲ್ಯಾ ಮಹಿಳಾ ಸಮಾಜದ ಜಿಲ್ಲಾಧ್ಯಕ್ಷರಾದ ಪುಷ್ಪಾ ಆನಂದ್, ಹೆಚ್. ಜಿ.ಗಣೇಶಪ್ಪ, ಸುಧಾ ಇಟ್ಟುಗುಡಿ ಮಂಜುನಾಥ್, ಆಶಾ ಉಮೇಶ್, ಮುಖಂಡರಾದ ಪುಟ್ಟಪ್ಪ, ರಾಜಣ್ಣ, ಹದಡಿ ಬಸವರಾಜಪ್ಪ, , ಹಾಲೇಕಲ್ಲು ಎಸ್.ಟಿ. ಅರವಿಂದ್, ಎಸ್.ಎಸ್.ಗಿರೀಶ್. ಎಸ್.ಟಿ.ರಾಜೇಶ್, ಬಿ.ಲಿಂಗರಾಜು, ಶಿವಣ್ಣ ಮಾಸ್ಟರ್, ಇಟ್ಟಿಗುಡಿ ಮಂಜುನಾಥ್, ಜಯಣ್ಣ, ಕೊಗ್ಗನೂರು ಮಂಜುನಾಥ್, ಪರಶುರಾಮ್ ಮತ್ತಿತರರು ಪಾಲ್ಗೊಂಡಿದ್ದರು. ಹೈಸ್ಕೂಲ್ ಮೈದಾನದವರೆಗೆ ಮೆರವಣಿಗೆ ನಡೆಯಿತು.