ಐದು ವಿಕೆಟ್‌ ಕಬಳಿಸಿದ ಅರ್ಜುನ್ ತೆಂಡೂಲ್ಕರ್‌

0
44

ಪಣಜಿ: ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ಐದು ವಿಕೆಟ್‌ ಕಬಳಿಸಿ ಮಿಂಚಿದ್ದಾರೆ.
ಪೊರ್ವೊರಿಮ್‌ನ ಗೋವಾ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿ ಮೈದಾನದಲ್ಲಿ ಗೋವಾ ಮತ್ತು ಅರುಣಾಚಲ ಪ್ರದೇಶ ತಂಡಗಳ ನಡುವೆ ನಡೆಯುತ್ತಿರುವ ಪ್ಲೇಟ್ ಹಂತದ ರಣಜಿ ಪಂದ್ಯದಲ್ಲಿ 25 ವರ್ಷದ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್, ಕೇವಲ 9 ಓವರ್‌ಗಳಲ್ಲಿ 25 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಈ 9 ಓವರ್‌ಗಳಲ್ಲಿ ಮೂರು ಮೇಡನ್ ಓವರ್‌ಗಳೂ ಸೇರಿದ್ದವು. ತಮ್ಮ 17ನೇ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಅರ್ಜುನ್ ತೆಂಡೂಲ್ಕರ್, ಅರುಣಾಚಲ ಪ್ರದೇಶದ ಬ್ಯಾಟಿಂಗ್ ಅನ್ನು ತಮ್ಮ ಪರಿಣಾಮಕಾರಿ ಬೌಲಿಂಗ್ ದಾಳಿಯ ಮೂಲಕ ಧೂಳಿಪಟ ಮಾಡಿದರು. ಈ ಪಂದ್ಯಕ್ಕೂ ಮುನ್ನ ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 16 ಪಂದ್ಯಗಳಲ್ಲಿ 32 ವಿಕೆಟ್ ಗಳನ್ನು ಪಡೆದಿದ್ದಾರೆ.

Previous articleಸರಕಾರಿ ಜಮೀನಿನಲ್ಲಿದ್ದ ಮನೆ ನೆಲಸಮ: ವೃದ್ಧ ಕೂಲಿ ಕಾರ್ಮಿಕ ದಂಪತಿ ಬೀದಿಪಾಲು
Next articleಕೃಷಿ ಮೇಳ: ಹವಾಮಾನ ಚತುರ ಡಿಜಿಟಲ್ ಕೃಷಿ