ಆರ್ಟಿಕಲ್ 370 ತೆಗೆದಿದ್ದೇ ಹತ್ಯೆಗೆ ಕಾರಣ

0
26

ಮಂಡ್ಯ: ಕೇಂದ್ರದ ಎನ್‌ಡಿಎ ಸರ್ಕಾರ ಕಾಶ್ಮೀರದಲ್ಲಿ ಆರ್ಟಿಕಲ್ 370 ಕಾಯ್ದೆ ತೆಗೆದಿದ್ದೇ 28 ಮಂದಿ ಪ್ರವಾಸಿಗರ ಹತ್ಯೆಗೆ ಕಾರಣ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಟಿಕಲ್ 370 ತೆಗೆಯೋದಕ್ಕೂ ಮೊದಲ ಕೇಂದ್ರ ಸರ್ಕಾರ ಯೋಚನೆ ಮಾಡಬೇಕಿತ್ತು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅತಿಯಾದ ಆತ್ಮವಿಶ್ವಾಸದಿಂದ ಘಟನೆ ನಡೆದಿದೆ ಎಂದು ಆಪಾದಿಸಿದರು.
ಆರ್ಟಿಕಲ್ 370 ತೆಗೆಯುವ ಮುನ್ನಾ ಕಾಶ್ಮಿರದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿತ್ತು. ಅವರ ದುಡುಕಿನ ನಿರ್ಧಾರದಿಂದ ಈ ಘಟನೆ ನಡೆದಿದೆ. ಜನರ ಭಾವನೆ ಅರ್ಥ ಮಾಡಿಕೊಂಡು ಆರ್ಟಿಕಲ್ 370 ತೆಗೆಯಬೇಕಿತ್ತು ಎಂದರು.

Previous articleಮಂತ್ರಾಲಯದ ಶ್ರೀರಾಯರ ಹುಂಡಿಯಲ್ಲಿ 4.05 ಕೋಟಿ ಹಣ ಸಂಗ್ರಹ
Next articleಉಗ್ರಗಾಮಿಗಳು ಪಾಕಿಸ್ತಾನದಲ್ಲಿ ಅಡಗಿದ್ದರೂ ನುಗ್ಗಿ ಹೊಡೆಯುತ್ತಾರೆ