ಅಯ್ಯೋಧ್ಯಾನಗರ ಚಾಕು ಇರಿತ ಪ್ರಕರಣ: ಏಳು ಜನ‌ ಬಂಧನ

0
26

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಾರುತಿ ಎಂಬ ಯುವಕನಿಗೆ ಚಾಕು ಇರಿದ ಪ್ರಕರಣದಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಯೋಧ್ಯಾ ನಗರದಲ್ಲಿ ಮಾರುತಿ ನಾರಾಯಪುರ ಎಂಬುವರಿಗೆ ಚಾಕು ಇರಿದು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಏಳು ಜನ ಆರೋಪಿಗಳು ಓರ್ವ ಬಾಲಕನನ್ನು ಬಂಧಿಸಲಾಗಿದೆ ಎಂದರು.
ಹಳೇಹುಬ್ಬಳ್ಳಿಯ ಶಿವಶಂಕರ ಕಾಲೋನಿ ನಿವಾಸಿಗಳಾದ ರೋಹಿತ ಹಂಚಿನಮನಿ, ವಿಶಾಲಾ ಬಿಲಾನಾ, ಕುಶಾಲ ವಜ್ಜನ್ನವರ, ಶ್ರೀನಾಥ ದುಂಡಿ, ವಿಶಾಲ ಡೋಣಿ, ಅಜಯ್ ಹಂಚಿನಮನಿ, ಪೃಥ್ವಿರಾಜ ಕೌದಿ ಸೇರಿ ಓರ್ವ ಬಾಲಕನನ್ನು ಬಂಧಿಸಲಾಗಿದೆ ಎಂದರು.
ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಾಟೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

Previous articleಗ್ಯಾರಂಟಿ ಯೋಜನೆ: ಹಿಮಾಚಲದಂತೆ ಕರ್ನಾಟಕವು ಹಿಂತೆಗೆದುಕೊಳ್ಳುವದೇ…
Next articleಆತ್ಮಹತ್ಯೆಗೆ ಶರಣಾದ ಸಚಿನ್ ಗುತ್ತಿಗೆದಾರನೇ ಅಲ್ಲ…