ಅಪ್ರಾಪ್ತ ಬಾಲಕ ಆತ್ಮಹತ್ಯೆ

0
57

ಬಂಟ್ವಾಳ: ಅಪ್ರಾಪ್ತ ಬಾಲಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ನಡೆದಿದೆ.
ತುಂಬೆ ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ ಏಕೈಕ ಪುತ್ರ ತೇಜಸ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ತೇಜಸ್ ಮೊಡಂಕಾಪು ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸಂಜೆ ಕಾಲೇಜು ಬಿಟ್ಟು ಮನೆಗೆ ಬಂದಿದ್ದಾನೆ. ಹೆತ್ತವರಿಬ್ಬರು ಖಾಸಗಿ ಕೆಲಸದಲ್ಲಿರುವ ಕಾರಣ ಅವರು ಮನೆಗೆ ಬರುವಾಗ ರಾತ್ರಿಯಾಗುತ್ತದೆ. ಸೋಮವಾರ ರಾತ್ರಿ ತೇಜಸ್ ತಂದೆ ಮನೆಗೆ ಬಂದಾಗ ಬಾಗಿಲು ಹಾಕಿದ್ದು, ಕಂಡು ಮನೆಯೊಳಗೆ ನೋಡಿದಾಗ ಕೋಣೆಯಲ್ಲಿ ಈತ ನೇಣು ಬಿಗಿದು ನೇತಾಡುತ್ತಿರುವುದು ಕಂಡು ಬಂದಿದೆ.
ಕೂಡಲೇ ಆಸ್ಪತ್ರೆಗೆ ತರಲಾಗಿದೆಯಾದರೂ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous article12ನೇ ತರಗತಿ ಓದಿ ಸಾವಿರಾರು ಕೋಟಿ ಆಸ್ತಿ ಮಾಡ್ಕೊಂಡ್ರಿ…
Next article‘ಮಗು ಭಾಗ್ಯ’ ಪ್ರಕರಣ ಪಕ್ಷಕ್ಕೆ ಮುಜುಗರ: ಕಾರಣ ಕೇಳಿ ನೋಟಿಸ್