ಅಧ್ಯಕ್ಷ ಸ್ಥಾನಕ್ಕೆ ಡಿ. ಕೆ. ಸುರೇಶ್ ನಾಮಪತ್ರ

0
31

ಬೆಂಗಳೂರು: ಬಮೂಲ್ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಮಾಜಿ ಸಂಸದ ಡಿ. ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಈ ಕುರಿತಂತೆ ಸಾಮಜಿಕ ಜಾಲತಾಣದಲ್ಲಿ ಡಿ. ಕೆ. ಸುರೇಶ್ ಅವರು ದೃಶ್ಯ ಹಂಚಿಕೊಂಡು ಪೋಸ್ಟ್‌ ಮಾಡಿದ್ದಾರೆ, ಹೈನುಗಾರರ ಬದುಕು ಹಸನಾಗಿಸಲು ಪಣ ತೊಟ್ಟು, ಇಂದು ಬೆಂಗಳೂರಿನ ಡೈರಿ ಸರ್ಕಲ್‌ನಲ್ಲಿ ಬಮೂಲ್‌ನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆಯನ್ನು ಸಲ್ಲಿಸಿದೆ. ನಮ್ಮ ಹೈನುಗಾರರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಈ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಹಾಗೂ ಆಶೀರ್ವಾದವಿರಲಿ. ನಾವೆಲ್ಲರೂ ಸೇರಿ ಕ್ಷೀರೋದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರೋಣ ಎಂದಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಎಂಎಲ್ಸಿಗಳಾದ ಪುಟ್ಟಣ್ಣ, ಎಸ್ ರವಿ, ಮುಖಂಡರಾದ ಆರ್ ಕೆ ರಮೇಶ್ ಮತ್ತಿತರರು ಇದ್ದರು

Previous articleಅಂತರರಾಷ್ಟ್ರೀಯ ಅನಿಮೇಷನ್ ಉತ್ಸವ: ‘ದೇಸಿ ಊನ್’ ಚಿತ್ರಕ್ಕೆ ಜ್ಯೂರಿ ಪ್ರಶಸ್ತಿ
Next articleಜನಾರ್ದನ ರೆಡ್ಡಿ:ಶಾಸಕ ಸ್ಥಾನದ ಅನರ್ಹ ಆದೇಶಕ್ಕೆ ತಡೆ