ಅಡ್ಜಸ್ಟ್ ಮಾಡ್ಕೊಂಡಿದ್ರೆ ನಾನೇ ಸಿಎಂ ಆಗ್ತಿದ್ದೆ: ಯತ್ನಾಳ

0
30
ಶಾಸಕ ಯತ್ನಾಳ

ಹಾವೇರಿ(ಶಿಗ್ಗಾವಿ): ಮಂತ್ರಿ ಪಟ್ಟದ ಸಲುವಾಗಿ ಬ್ಲಾಕ್‌ಮೇಲ್ ಮಾಡೋದು ನನ್ನ ಜೀವನದಲ್ಲಿ ಮಾಡಿಲ್ಲ. ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ, ನಾನೇ ಮುಖ್ಯಮಂತ್ರಿ ಆಗಿರುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.
ಶಿಗ್ಗಾವಿಯಲ್ಲಿ ಮಾತನಾಡಿದ ಅವರು, ಯಾ ಮಗಗ ಬೇಕಾಗೈತ್ರಿ ಮಂತ್ರಿಗಿರಿ? ನಮ್ಮ ಗುರುಗಳ ಬಗ್ಗೆ ಯಾರೂ ಸಂಶಯ ಪಡಬೇಡಿ. ಹಿಂದೊಬ್ಬ ಮುಖ್ಯಮಂತ್ರಿ ನಮಗ ಮೋಸ ಮಾಡಿದ ಎಂದು ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕುರಿತು ಕಳೆದೆರಡು ತಿಂಗಳ ಹಿಂದೆ ಸಿಎಂ ಬೊಮ್ಮಾಯಿಯವರು ಮೂರು ತಿಂಗಳು ಸಮಯ ಕೇಳಿದ್ದರು. ನಿನ್ನೆ ಸಿಎಂ ಬೊಮ್ಮಾಯಿಯವರು ನಮ್ಮ ಸಮಾಜದ ಸಚಿವ ಸಿ.ಸಿ. ಪಾಟೀಲರನ್ನು ಕರೆದು ಮತ್ತೊಂದು ಅವಕಾಶ ಕೇಳಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ನಿರ್ಣಯ ಮಾಡುತ್ತೇವೆ ಎಂದು ಎಚ್ಚರಿಸಿದರು.

ಯತ್ನಾಳ
Previous articleಪಂಚಮಸಾಲಿ ಮೀಸಲಾತಿ: ಸಿ.ಸಿ. ಪಾಟೀಲ ಸಂಧಾನ
Next articleಮಧ್ಯರಾತ್ರಿ ಗಡಿಯಾರ ಕಂಬ ನೆಲಸಮ: ರಾತ್ರಿ ಇಡೀ ಕಾಂಗ್ರೆಸ್ ಧರಣಿ