ಬೆಂಗಳೂರು: ಶುಕ್ರವಾರ ಬಂತೆಂದರೆ ಸಿನಿಮಾದವರಿಗೆ ಹಬ್ಬದ ದಿನ. ಈ ಶುಕ್ರವಾರ ಸಿನಿಪ್ರಿಯರಿಗೆ ಒಟ್ಟು ೮ ಕನ್ನಡ ಚಿತ್ರಗಳ ರಸದೌತಣ ಸಿಗಲಿದೆ, 22 ವಾರಗಳಲ್ಲಿ 100 ಚಿತ್ರಗಳು ಬಿಡುಗಡೆಯಾಗಿವೆ. ಈ ಶುಕ್ರವಾರ 29 ನೇ ವಾರಕ್ಕೆ ೮ ಚಿತ್ರಗಳು ತೆರೆಗೆ ಬರಲು ಸಿದ್ದವಾಗಿವೆ, ಬಹು ನಿರಿಕ್ಷಿತ ಹೊಸಬರ ತಂಡದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ಸೇರಿದಂತೆ “ಅಂಬುಜ” ಎಂಬ ಮಹಿಳಾ ಪ್ರಧಾನ ಸಿನಿಮಾ. ನಟ ಹಾಗೂ ನಿರ್ದೇಶಕ ಶ್ರೇಯಸ್ ಚಿಂಗಾ ಅವರ ಚಿತ್ರ “ಡೇವಿಡ್”, ಒಬ್ಬ ಸಾಮಾನ್ಯ ಹುಡುಗ ಹೇಗೆ ಬೆಂಗಳೂರನ್ನು ಆಳುತ್ತಾನೆ ಎಂಬ ಕಥಾಹಂದರವಿರುವ ‘ಡಾನ್ ಕುಮಾರ’, ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದೇವರ ಕನಸು’, ಯುವ ನಿರ್ದೇಶಕ ರವಿಕಿರಣ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ‘ನಿಮ್ಮೆಲ್ಲರ ಆಶೀರ್ವಾದ’, ಪ್ರಸಿದ್ದ ದೇಸಿ ಕಲೆ ವೀರಗಾಸೆ ಮತ್ತು ತಂದೆ-ಮಗನ ನಡುವಿನ ಭಾಂದವ್ಯದ ಬಗ್ಗೆಗಿನ ಕಥಾಹಂದರ ಹೊಂದಿರುವ ಚಿತ್ರ ‘ಪರಂವಃ’. ಆಲೋಪತಿ ವೈದ್ಯರು ಹಾಗೂ ಔಷಧಿ ಕಂಪನಿಗಳು ಜನರನ್ನು ಹೇಗೆ ವಂಚಿಸುತ್ತಿವೆ ಎಂಬ ಬಗ್ಗೆ ಬೆಳಕು ಚೆಲ್ಲುವ “ಮಧುರ ಕಾವ್ಯ” ಚಿತ್ರಗಳು ಸಿನಿಪರದೆಯ ಮೇಲೆ ರಾರಾಜಿಸಲಿವೆ.