ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುರಿದ ಬಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತ

0
30

ರಾಯಚೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಜನಜೀವನ ಅಸ್ಥವ್ಯಸ್ಥಗೊಂಡಿದೆ.
ನಿಯತ ಕಾನ್ , ಸುಖಾಣಿ ಕಾಲೋನಿ, ಜಲಾಲನಗರದಲ್ಲಿ ಮನೆಗಳಿಗೆ ನೀರು‌ ನುಗ್ಗಿದೆ. ರಾಜಕಾಲುವೆ ಗೋಡೆ ಕುಸಿದು ಬಿದ್ದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ.ಮನೆಯಲ್ಲಿನ ದವಸ ಧಾನ್ಯ ನೀರು ಪಾಲಾಗಿವೆ.
ರಾತ್ರಿಯಿಡೀ ಮನೆಯಿಂದ ನೀರು ಎತ್ತಿಹಾಕಲು ನಿವಾಸಿಗಳ ಹರಸಾಹಸಪಡುತ್ತಿದ್ದಾರೆ. ವೃದ್ದರು,ಚಿಕ್ಕಮಕ್ಕಳು‌ ಸೇರಿ ನಿವಾಸಿಗಳು ರಾತ್ರಿಯಿಡೀ ಪರದಾಟ ನಡೆಸಿದ್ದಾರೆ.
ತಗ್ಗು ಪ್ರದೇಶದ ಬಡಾವಣೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ರಾಜಕಾಲುವೆ ಕುಸಿದು ಬಿದ್ದಿರುವುದು ಹಾಗೂ ಬಹಳ ದಿನಗಳಿಂದ ಸ್ವಚ್ಚಗೊಳಿಸದ ಹಿನ್ನೆಲೆ ಬಡಾವಣೆ ಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸಿದೆ.

Previous articleಬೆಂಗಳೂರು ಯೋಗ್ಯವಲ್ಲ ಎನ್ನುವವರು ಬೆಂಗಳೂರಿಗೆ ಬರಬೇಡಿ: ಮುನಿರತ್ನ
Next articleತುಂಬಿ ಹರಿವ ಹಳ್ಳದಲ್ಲೇ ಗರ್ಭಿಣಿಯನ್ನ ಹೊತ್ತೊಯ್ದ 108 ಆ್ಯಂಬುಲೆನ್ಸ ವಾಹನ.