ತಹಶೀಲ್ದಾರ್​​​​​ ಎದುರೇ ಬೈದಾಡಿಕೊಂಡ ರೇಣುಕಾಚಾರ್ಯ-ಶಾಂತನಗೌಡ

0
33

ದಾವಣಗೆರೆ : ಹೊನ್ನಾಳಿಯಲ್ಲಿ ಹಾಲಿ-ಮಾಜಿ MLA ವಾರ್​​​​ ಜೋರಾಗಿದ್ದು, ರೇಣುಕಾಚಾರ್ಯ- ಶಾಂತನಗೌಡ ನಡುವೆ ಮಾತಿನ ಯುದ್ಧ ನಡೆದಿದೆ.

ಮಾಜಿ-ಹಾಲಿಗಳ ಜಗಳದ ವಿಡಿಯೋ ಭಾರೀ ವೈರಲ್​​ ಆಗಿದ್ದು, ತಹಶೀಲ್ದಾರ್​​​​​ ಎದುರೇ ರೇಣುಕಾ-ಶಾಂತನಗೌಡ ಬೈದಾಡಿಕೊಂಡಿದ್ದಾರೆ. ಮಳೆಗೆ ಕುಸಿದ ಮನೆಗಳ ಪರಿಹಾರ ವಿಚಾರವಾಗಿ ಜಗಳ ನಡೆದಿದ್ದು, ಉದ್ದೇಶ ಪೂರ್ವಕವಾಗಿಯೇ ಕೆಲವರಿಗೆ ಪರಿಹಾರ ಕೊಡ್ತಿಲ್ಲ, ಪರಿಹಾರದಲ್ಲೂ ರಾಜಕೀಯ ಎಂದು ಶಾಂತನಗೌಡ ಆರೋಪ ಮಾಡಿದ್ದಾರೆ. ತಹಶೀಲ್ದಾರ್​​​ ಎದುರೇ ಮಾಜಿ MLA ಅವಾಚ್ಯ ಶಬ್ದ ಬಳಸಿದ್ದಾರೆ. ಶಾಸಕ ರೇಣುಕಾಚಾರ್ಯ ಬೆಂಬಲಿಗರಿಂದ ಆರೋಪ ಕೇಳಿಬಂದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಹಶೀಲ್ದಾರ್​​ ಕಚೇರಿಯಲ್ಲಿ ವಾಗ್ವಾದ ನಡೆದಿದೆ.

Previous articleಸೇವೆಯ ಹೆಸರಲ್ಲಿ ಮತಾಂತರ ಮಾಡಲಾಗಿತ್ತು-ಈಗ ಕಾಯ್ದೆ ಮೂಲಕ ಕಡಿವಾಣ ಹಾಕಲಾಗಿದೆ – ಆರಗ ಜ್ಞಾನೇಂದ್ರ
Next articleವಿಮ್ಸ್ಗೆ ಭೇಟಿನೀಡಿದ ಡಾ. ಸ್ಮಿತಾ ನೇತೃತ್ವದ ವಿಶೇಷ ತಂಡ