ಬೆಂಗಳೂರು: ರಷ್ಯಾದಲ್ಲಿ ಜಯಭೇರಿಯಾಗಿ ಶಿವಮ್ಮ ನೇರವಾಗಿ ಆಸ್ಟ್ರೇಲಿಯಾಗೆ ಬರುತ್ತಿದ್ದಾರೆ ಎಂದು ನಟ, ನಿರ್ದೇಶಕ, ರಿಷಬ್ ಶೆಟ್ಟಿ ಹೇಳಿದ್ದಾರೆ, ಅವರ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಶಿವಮ್ಮ ಚಿತ್ರವು ಇತ್ತೀಚೆಗೆ ಖ್ಯಾತ ನಿರ್ದೇಶಕ ಆಂಡ್ರಿ ತರ್ಕೋವ್ಸ್ಕಿ ಸ್ಮರಣಾರ್ಥದಲ್ಲಿ ನೆಡೆಯುವ ಆಂಡ್ರಿ ತರ್ಕೋವ್ಸ್ಕಿ ಚಿತ್ರೋತ್ಸವದಲ್ಲಿ ‘ಶಿವಮ್ಮ’ ಚಿತ್ರ ‘ಗ್ರ್ಯಾಂಡ್ ಪ್ರಿಕ್ಸ್’ ಪ್ರಶಸ್ತಿಗೆ ಭಾಜನವಾಗಿತ್ತು, ಈ ಪ್ರತಿಷ್ಠಿತ ಮನ್ನಣೆಯನ್ನು ಪಡೆದ ಮೊದಲ ಕನ್ನಡ ಚಿತ್ರವಾದ ಶಿವಮ್ಮ ಚಿತ್ರಕ್ಕೆ ಇದು 5ನೇ ಗರಿಯಾಗಿತ್ತು.
ಇದರ ಬೆನ್ನಲ್ಲೇ ಈ ಕುರಿತು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು ರಷ್ಯಾದಲ್ಲಿ ಜಯಭೇರಿಯಾಗಿ ಶಿವಮ್ಮ ನೇರವಾಗಿ ಆಸ್ಟ್ರೇಲಿಯಾಗೆ ಬರುತ್ತಿದ್ದಾರೆ. ಆಸ್ಟ್ರೇಲಿಯಾದ ಕನ್ನಡಿಗರು ಶಿವಮ್ಮಳನ್ನು ಬೆಳ್ಳಿಪರದೆಯ ಮೇಲೆ ಭೇಟಿಯಾಗಲು ಮರೆಯದಿರಿ ಎಂದಿದ್ದಾರೆ, ಜೈ ಶಂಕರ್ ಆರೇರ ಅವರ ಕಥೆ ಹಾಗೂ ನಿರ್ದೆಶನದ ಶಿವಮ್ಮ ಚಿತ್ರ ನಿಜ ಜೀವನದ ಘಟನೆಗಳು ಮತ್ತು ನಮ್ಮ ಸುತ್ತಲಿನ ಘಟನೆಗಳಿಂದ ಕೂಡಿದ ನೇರ ಮಾರ್ಕೆಟಿಂಗ್ ವಿಷಯಾದಾರಿತ ಚಿತ್ರವಾಗಿದೆ.