ಭೂ ಸ್ವಾಧೀನ ಅಧಿಕಾರಿ ಉಮೇಶ್ ಬಂಧನ

0
23
ಬಂಧನ

ಚಿಕ್ಕಮಗಳೂರು : ಅಕ್ರಮ ಭೂ ಮಂಜೂರಾತಿ ಪ್ರಕರಣದ ಆರೋಪಿಯನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ, ಈ ಹಿಂದಿನ ಕಡೂರು ತಾಲೂಕು ತಹಶೀಲ್ದಾರ್ ಜೆ ಉಮೇಶ್ ಅವರನ್ನು ಕಡೂರು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಕಾರವಾರದ ಸೀ ಬರ್ಡ್ ಭೂಸ್ವಾಧೀನ ಅಧಿಕಾರಿಯಾಗಿದ್ದ ಜೆ ಉಮೇಶ್ ಅವರ ಮೇಲೆ ಅಕ್ರಮ ಭೂ ಮಂಜೂರಾತಿ ಆರೋಪ ಎದುರಿಸುತ್ತಿದ್ದರು. ಇತ್ತೀಚೆಗೆ ಕಾರವಾರ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. ಅಕ್ರಮ ಬಹುಮಂಜೂರಾತಿ ಸಂಬಂಧ ತರೀಕೆರೆ ಉಪ ವಿಭಾಗ ಅಧಿಕಾರಿ ಕಡೂರು ಪೊಲೀಸ್ ಠಾಣೆಯಲ್ಲಿ ಹಿಂದಿನ ತಹಸಿಲ್ದಾರ್ ಜೆ ಉಮೇಶ್ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ತಹಸೀಲ್ದಾರ್ ಜೆ ಉಮೇಶ್ ಕಣ್ಮರೆಯಾಗಿದ್ದರು.
ಅಕ್ರಮ ಭೂ ಮಂಜೂರಾತಿ ಪ್ರಕರಣದ ಆರೋಪಿ ಉಮೇಶ್‌ರವರನ್ನು ಕಡೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಜಿಲ್ಲೆಯಲ್ಲಿನ ಭೂ ಅಕ್ರಮ ಮಂಜೂರಾತಿ ಸಂಬಂಧ ಸರ್ಕಾರ 15 ಜನ ತಹಸೀಲ್ದಾರ್ ಉಳ್ಳ ತಂಡವನ್ನು ರಚಿಸಿದ್ದು ಈ ತಂಡ ತನಿಕೆಯಲ್ಲಿ ನಿರತವಾಗಿದೆ. ತನಿಕೆಯಿಂದ ಅಪಾರ ಪ್ರಮಾಣದ ಅಕ್ರಮ ಭೂ ಮಂಜೂರಾತಿ ಬೆಳಕಿಗೆ ಬರುತ್ತಿದ್ದು ಸದ್ಯ ಕಡೂರು ತಾಲೂಕಿನ ಹಿಂದಿನ ತಹಸಿಲ್ದಾರ್ ಜೆ ಉಮೇಶ್ ರವರನ್ನು ಬಂಧನವಾಗಿದೆ ಈ ಪ್ರಕರಣದ ಉಳಿದ ಇಬ್ಬರು ಅಧಿಕಾರಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

Previous articleಭಗವಂತನ ನಾಮ ಶ್ರವಣ ಮಾಡುವ ಶ್ರಾವಣ
Next articleಶಿವಾಜಿ ಮೂರ್ತಿ ತೆರವು ಅಕ್ಷಮ್ಯ ಅಪರಾಧ