ಛತ್ತೀಸ್‌ಗಢ: ನಕ್ಸಲರು ನಡೆಸಿದ ಸ್ಫೋಟದಲ್ಲಿ 10 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢ ದಾಂತೇವಾಡದಲ್ಲಿ ನಡೆದಿದೆ.
ರಾಜ್ಯ ಪೊಲೀಸ್ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ತಂಡದ ವಾಹನದ ಮೇಲೆ ನಕ್ಸಲರು ಐಇಡಿ(ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಓರ್ವ ವಾಹನ ಚಾಲಕ ಮತ್ತು 10 ಮಂದಿ ಪೊಲೀಸರು ಸೇರಿ 11 ಮಂದಿ ಡಿಆರ್‌ಜಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ದಂತೇವಾಡದ ಅರನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಮಾವೋವಾದಿಗಳ ಇರುವಿಕೆಯ ಬಗ್ಗೆ ಮಾಹಿತಿ ಸಿಕ್ಕ ಕಾರಣ ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಡಿಆರ್‌ಜಿ ತಂಡವನ್ನು ಕಳುಹಿಸಲಾಗಿತ್ತು. ನಕ್ಸಲೀಯರ ವಿರುದ್ಧ ಕಾರ್ಯಾಚರಣೆ ಮುಗಿಸಿ ಹಿಂತಿರುಗುತ್ತಿದ್ದಾಗ ನಕ್ಸಲರು ಐಇಡಿ ಸ್ಫೋಟಿಸಿದ್ದಾರೆ.
