ಕಾಂಗ್ರೆಸ್ ಪಕ್ಷ ಅಧಃಪತನವಾಗುತ್ತಿದೆ: ಸಿಎಂ ಬೊಮ್ಮಾಯಿ

0
33
ಬಸವರಾಜ ಬೊಮ್ಮಾಯಿ

ಮೈಸೂರು: ಕಾಂಗ್ರೆಸ್ ಪಕ್ಷ ಅಧಃಪತನವಾಗುತ್ತಿದೆ. ಪೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ದಯವಿಟ್ಟು ಮಾಡಲಿ. ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನ್ನ ತಟ್ಟೆಯಲ್ಲಿ ಸರಣಿ ಹಗರಣಗಳಲ್ಲಿಟ್ಟುಕೊಂಡು ಈ ರೀತಿಯ ಡರ್ಟಿ ಅಭಿಯಾನ ಮಾಡುತ್ತಿದ್ದಾರೆ. ಅದರಲ್ಲೇನಿದೆ? ಯಾವುದಾದರೂ ಪ್ರಕರಣವಿದೆಯೇ? ಇದೊಂದು ಅಭಿಯಾನವಷ್ಟೇ. ಜನ ಇನ್ನು ನೋಡಿಯಾಗಿದೆ. ಆಪ್, ಅಂತರ್ಜಾಲದಿಂದ ಕೂತಲ್ಲೇ ಏನೆಲ್ಲಾ ಮಾಡಬಹುದು ಎಂದು ಸಣ್ಣ ಸಣ್ಣ ಯುವಕರಿಗೂ ಗೊತ್ತಿದೆ. ಇದೊಂದು ಮೋಸದ ಸುದ್ದಿ ಎಂದು ಸ್ಪಷ್ಟವಾಗಿದೆ. ಲಿಂಗಾಯತ ಸಮುದಾಯದ ಸಿಎಂಗಳನ್ನು ಗುರಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಅಭಿಯಾನ ಮಾಡಿದಾಗ ಕೆಲವರು ಸಿಟ್ಟು ಬಂದು ಮಾತನಾಡಿರಬಹುದು. ಆದರೆ, ಅದರಲ್ಲಿ ನಾನಿಲ್ಲ ಎಂದರು. ಸಾರ್ವಜನಿಕರಿಗೆ ಇದು ಅರ್ಥವಾಗುತ್ತದೆ. ತಮ್ಮ ಸ್ವಾರ್ಥಕ್ಕೆ, ಅಧಿಕಾರಕ್ಕೆ ಬರಲು ರಾಜ್ಯದ ಮರ್ಯಾದೆ, ಹೆಸರನ್ನೂ ಬಲಿಕೊಡಲು ಸಿದ್ಧರಿರುವ ಸ್ವಾರ್ಥಿಗಳು ಎಂದು ತಿಳಿಸಿದರು.

Previous articleಪಂಡಿತ್ ದೀನ್ ದಯಾಳ ಉಪಾಧ್ಯಾಯ ದೇಶ ಕಂಡ ಅಪರೂಪದ ದೇಶಪ್ರೇಮಿ: ಸಿಎಂ ಬೊಮ್ಮಾಯಿ
Next articleಅರ್ಥಪೂರ್ಣ, ವೈಭವಪೂರ್ಣ ದಸರಾ ಆಚರಣೆ: ಸಿಎಂ