ರಾಘು ಏಕಾಂಗಿ ಹೋರಾಟ

0
24

ಆರಂಭದಿಂದಲೂ ವಿಭಿನ್ನ ಕಥಾಹಂದರದ ಸುಳಿವು ನೀಡುವ ಮೂಲಕ ಸಿನಿಮಾಸಕ್ತರಲ್ಲಿ ನಿರೀಕ್ಷೆ ಮೂಡಿಸಿರುವ ರಾಘು ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ನಟಿಸಿರುವ ಏಕವ್ಯಕ್ತಿ ಚಿತ್ರವಿದು ಎಂಬುದು ವಿಶೇಷ. ಜತೆಗೆ ಒಂದಿಷ್ಟು ಕೌತುಕಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿರುವ `ರಾಘು’ ತಂಡ, ತೆರೆಯ ಮೇಲಿನ ವಿಜಯ ರಾಘವೇಂದ್ರ ಹೋರಾಟವನ್ನು ಪ್ರೇಕ್ಷಕರು ಯಾವ ರೀತಿ ಒಪ್ಪಿಕೊಂಡು, ಅಪ್ಪಿಕೊಳ್ಳಲಿದ್ದಾರೆ ಎಂದು ತುದಿಗಾಲಲ್ಲಿ ಕಾದು ನಿಂತಿದೆ.
ರಾಘು ಸಿನಿಮಾ ಈಗಾಗಲೇ ಟ್ರೇಲರ್ ಹಾಗೂ ಪೋಸ್ಟರ್ ಮೂಲಕ ಸಾಕಷ್ಟು ಸದ್ದು ಮಾಡಿದೆ. ಈ ಹೊಸ ಬಗೆಯ ಕಥೆಗೆ ಎಂ.ಆನಂದ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆನ ಹಾಗೂ ಬ್ಯಾಂಗ್ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಆನಂದ್‌ಗೆ ಚೊಚ್ಚಲ ಸಿನಿಮಾವಿದು. ಮೊದಲ ಹೆಜ್ಜೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಅವರ ಸಿನಿಮಾಭಿರುಚಿ ಮತ್ತು ಹೆಚ್ಚುಗಾರಿಕೆಗೆ ಸಾಕ್ಷಿಯಂತಿದೆ.
ಡಿ.ಕೆ.ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್‌ನಡಿ ರಾಘು ಸಿನಿಮಾವನ್ನು ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ್ ಕೋಟ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರ ಸಂಕಲನ, ರಿತ್ವಿಕ್ ಮುರುಳಿಧರ್ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಸೂರಜ್ ಜೋಯಿಸ್ ಸಂಗೀತವಿರುವ ಈ ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಹಾಗೂ ಅಲೋಕ್ ಧ್ವನಿಯಾಗಿದ್ದಾರೆ.

Previous articleಕ್ರೇಜಿ ತೀರ್ಪು
Next articleನಾಳೆಯಿಂದ ರಾಜ್ಯದ ಹಿರಿಯ ನಾಗರಿಕರ ಮತದಾನ