ಯಾದಗಿರಿ: ವ್ಯಕ್ತಿಯೋರ್ವ ತನ್ನ ಮಕ್ಕಳನ್ನೇ ಕೊಂದು ಹಾಕಿದ ಘಟನೆ ನಡೆದಿದೆ. ಈ ಕೃತ್ಯ ಕಂಡು ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ.
ಈ ಘಟನೆ ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ದುಗನೂರ್ ಹಟ್ಟಿಯಲ್ಲಿ ಗುರುವಾರ (ಸೆ.25) ಬೆಳಿಗ್ಗೆ ನಡೆದಿದೆ. ಶರಣಪ್ಪ ದುಗನೂರು ತನ್ನ ಮಕ್ಕಳಾದ ಸಾನ್ವಿ(4) ಹಾಗೂ ಭಾರ್ಗವ (2 ವರ್ಷ) ಇಬ್ಬರನ್ನು ಮಂಚದ ಮೇಲೆ ಮಲಗಿದಾಗ ಕೊಡಲಿಯಿಂದ ಕೊಚ್ಚಿದ ರೀತಿಯಲ್ಲಿ ಕೊಲೆಗೈದಿರುವ ಅತ್ಯಂತ ಅಮಾನುಷ ಘಟನೆ ಇದಾಗಿದೆ ಎಂದು ಎಸ್ಪಿ ಪ್ರಥ್ವಿಕ್ ಶಂಕರ್ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಆರೋಪಿ ಶರಣಪ್ಪ ದುಗನೂರು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಇನ್ನೊಬ್ಬ ಮಗ ಹೇಮಂತ (8) ತಪ್ಪಿಸಿಕೊಂಡು ಗಾಬರಿಯಿಂದ ಹೊರ ಬಂದಿದ್ದಾನೆ. ಗಾಯಾಳು ಹೇಮಂತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.