ಹೊಸಪೇಟೆ: ಎಸ್ಟಿ ಪ್ರಸ್ತಾವಕ್ಕೆ ವಿರೋಧ, ವಾಲ್ಮೀಕಿ ನಾಯಕರ ಬೃಹತ್ ಪ್ರತಿಭಟನೆ

0
68

ಹೊಸಪೇಟೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಕುರುಬ ಸಮಾಜ ಸೇರಿದಂತೆ ಇನ್ನಿತರ ಸಮಾಜಗಳನ್ನು ಸೇರ್ಪಡೆ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಗುರುವಾರ ಹೋಸಪೇಟೆಯಲ್ಲಿ ವಾಲ್ಮೀಕಿ, ನಾಯಕ ಸಮಾಜವು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಸರ್ಕಾರಕ್ಕೆ ಬರೆದ ಮನವಿ ಸಲ್ಲಿಸಲಾಯಿತು.

ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವವನ್ನು 10 ದಿನದೊಳಗೆ ಕೈಬಿಡಬೇಕು. ತಪ್ಪಿದಲ್ಲಿ ಹೊಸಪೇಟೆ ಬಂದ್ ಸಹಿತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜದವರು ನಗರದ ವಾಲ್ಮೀಕಿ ವೃತ್ತದಲ್ಲಿ ಸಂಘಟನೆಗೊಂಡು ಕೆಲಕಾಲ ವಾಲ್ಮೀಕಿ ವೃತ್ತ ರಸ್ತೆಯನ್ನು ತಡೆದು ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರುದ್ಧ ಆಕ್ರೋಶ ಹೊರಹಾಕಿ ಕುರುಬ ಮತ್ತು ಇನ್ನಿತರ ಸಮಾಜಗಳನ್ನು ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡುವ ಕ್ರಮವನ್ನು ಈ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.

ನಂತರ ಮದಕರಿ ನಾಯಕ ವೃತ್ತದ ಮೂಲಕ ಸಾಗಿ ಬಂದ ಪ್ರತಿಭಟನೆ ಮೇರವಣೆಗೆಯು ಡಾ.ಬಿ.ಆರ್. ಅಂಬ್ಕೇಡರ್ ಅವರ ಪುತ್ಥಳಿಗೆ ಮಾರ್ಲಾಣೆ ಮಾಡಿ, ಪುನೀತ್‌ರಾಜ್ ಕುಮಾರ್ ವೃತ್ತಕ್ಕೆ ಆಗಮಿಸಿ ರಸ್ತೆ ತಡೆದ ಪ್ರತಿಭಟನೆ ನಡೆಸಿದರು.

ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಗೋಸಲ ಭರಮಪ್ಪ ಮಾತನಾಡಿ, ಇತ್ತೀಚಿಗಷ್ಟೇ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ.7ಕ್ಕೆ ಸರ್ಕಾರ ಹೆಚ್ಚಿಸಿದರು. ಅದರ ಫಲವನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಸಮುದಾಯಗಳು ಅನುಭವಿಸಿಲ್ಲ, ಇಗಿದ್ದರೂ ಸಹ 50 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಕುರುಬ ಮತ್ತಿತರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ವಾಲ್ಮೀಕಿ ಸಮುದಾಯವನ್ನು ಒಳಗೊಂಡಂತೆ ಪರಿಶಿಷ್ಟ ಪಂಗಡಪಟ್ಟಿಯಲ್ಲಿ ಅನೇಕ ಬುಡಕಟ್ಟು ಸಮುದಾಯಗಳ ಸ್ವಸ್ಥ ಅಭಿವೃದ್ಧಿಯ ಕನಸಾಗಿಯೇ ಉಳಿಯುತ್ತದೆ ಅಲ್ಲದೆ ಅವರ ಮುಂದಿನ ಬದುಕು ಅತ್ಯಂತ ದುಸ್ತರವಾಗುತ್ತದೆ ಎಂದು ಆಗ್ರಹಿಸಿದರು.

ತಾಲೂಕು ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ ಮಾತನಾಡಿ, ವಾಲ್ಮೀಕಿ ಗುರು ಪೀಠದ ಧರ್ಮದರ್ಶಿ ಬಿ.ಎಸ್. ಜಂಬಯ್ಯನಾಯಕ, ಪ್ರತಿಭಟನೆ ನಡೆಸಲಾಗುವುದು ಎಂದರು.

ಪಟ್ಟು: ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಲು ಆಗಮಿಸುತ್ತಿದ್ದಂತೆ ಪ್ರತಿಭಟನಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳೇ ಬರಬೇಕು ಎಂದು ಪ್ರತಿಭಟನೆ ನಡೆಸಿದರು. ಕೊನೆಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಬಂದು ಮನವಿ ಸ್ವೀಕರಿಸಿ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡುವುದಾಗಿ ಹೇಳಿದರು.

Previous articleಬಾಗಲಕೋಟೆ: ಮೆಡಿಕಲ್ ಕಾಲೇಜು ಸ್ಥಾಪನೆಗೆ 450 ಕೋಟಿ ರೂ.
Next articleಧಾರವಾಡ: ನೇಮಕಾತಿಗೆ ಆಗ್ರಹಿಸಿ ಉದ್ಯೋಗಾಂಕ್ಷಿಗಳ ಪ್ರತಿಭಟನೆ

LEAVE A REPLY

Please enter your comment!
Please enter your name here