ರಾಮನಗರ: ಕೆರೆಗಳಲ್ಲಿ ವಾಟರ್ ರೈಡಿಂಗ್ ಗೇಮ್ಸ್‌ಗಳಿಗೆ ಚಾಲನೆ

0
47

ರಾಮನಗರದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ರಂಗರಾಯರ ದೊಡ್ಡಿ ಕೆರೆಯಲ್ಲಿ ದೋಣಿ ವಿಹಾರಕ್ಕೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.

ರಂಗರಾಯರದೊಡ್ಡಿ ಕೆರೆಯಲ್ಲಿ ಶಾಸಕರು ದೋಣಿ ಡ್ರೈವ್ ಮಾಡುವ ಮೂಲಕ ಚಾಲನೆ ನೀಡಿ, ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಬೋಟಿಂಗ್, ವಾಟರ್ ರೈಡಿಂಗ್ ಗೇಮ್ಸ್‌ಗಳಿಗೆ ಚಾಲನೆ ನೀಡಿದ್ದು, ರಾಮನಗರ ಜನತೆಯ ಪಾಲಿಗೆ ಇದೊಂದು ಐತಿಹಾಸಿಕ ದಿನ” ಎಂದರು.

“ಜಲ ಕ್ರೀಡೆಗಳ ಅನುಭವ ಪಡೆಯಲು ನಮ್ಮ ಜಿಲ್ಲೆ ಸೇರಿದಂತೆ ಸುತ್ತಮುತ್ತ ಯಾವ ಜಿಲ್ಲೆಯಲ್ಲೂ ಇಂತಹ ಅವಕಾಶ ಇರಲಿಲ್ಲ. ಇದೀಗ ಪ್ರವಾಸೋದ್ಯಮ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಆಯ್ದ ಕೆರೆಗಳಲ್ಲಿ ಪ್ರವಾಸಿಗರ ಮನರಂಜನೆಗೆ ಅವಕಾಶ ಮಾಡಿಕೊಡಲಾಗಿದೆ” ಎಂದರು.

“ರಾಮನಗರದ ರಂಗರಾಯರದೊಡ್ಡಿ ಕೆರೆ ಸೇರಿದಂತೆ ಬಿಡದಿಯ ನೆಲ್ಲಿಗುಡ್ಡ ಕೆರೆ, ಮಾಗಡಿ ವೈ.ಜಿ.ಗುಡ್ಡ ಕೆರೆ ಹಾಗೂ ಮರಳವಾಡಿ ಬಳಿಯ ರಾವುತ್ತನ ಹಳ್ಳಿ ಕೆರೆಯಲ್ಲಿ ಜಲ ಕ್ರೀಡೆಗಳ ಸೇವೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

“ಸಾಹಸ ಜಲ ಕ್ರೀಡೆಗಳು ಮಾತ್ರವಲ್ಲದೆ ಕೆರೆ ಬಳಿ ರೆಸ್ಟೋರೇಂಟ್, ವಸತಿ ಗೃಹ, ಸುಸಜ್ಜಿತ ಶೌಚಾಲಯ ವ್ಯವಸ್ಥೆ ಸೇರಿದಂತೆ ಅಗತ್ಯ ಪ್ರವಾಸೋದ್ಯಮ ಮೂಲ ಸೌಕರ್ಯಗಳನ್ನು ಮುಂದಿನ ದಿನಗಳಲ್ಲಿ ಕಲ್ಪಿಸಲಾಗುವುದು. ಟಿಕೆಟ್ ದರಗಳು ಇನ್ನಷ್ಟೇ ನಿಗದಿ ಆಗಬೇಕು. ವಿದ್ಯಾರ್ಥಿ ಗಳಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡಲು ಸೂಚಿಸಲಾಗಿದೆ, ಸುಸಜ್ಜಿತ ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿ 8ರವರೆಗೆ ವಿಹಾರಕ್ಕೆ ಅವಕಾಶ ಮಾಡಿಕೊಡಲಾಗುವುದು” ಎಂದು ಶಾಸಕರು ಹೇಳಿದರು.

ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯತ ಸಿಇಓ ಅನ್ಮೋಲ್ ಜೈನ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು,ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Previous articleಬಿಡದಿ ಟೌನ್‌ಶಿ‌ಪ್: ರೈತರ ಭೂಮಿ ಕಿತ್ತುಕೊಳ್ಳಲು ಬಿಡುವುದಿಲ್ಲ
Next articleಪಿಎಂ ಗತಿಶಕ್ತಿ: ಭಾರತದ ಮೂಲಸೌಕರ್ಯ ಕ್ರಾಂತಿಗೆ ಡಿಜಿಟಲ್ ಚಾಲನೆ

LEAVE A REPLY

Please enter your comment!
Please enter your name here