ಗಿಫ್ಟ್‌ ಹಂಚಿಕೊಂಡೆ ಎಲೆಕ್ಷನ್‌ ನಡೆಸಿದ್ದಾರೆ

0
42

ರಾಮನಗರ: ವರುಣಾ ಕ್ಷೇತ್ರದ ಗಿಫ್ಟ್‌ ಪಾಲಿಟಿಕ್ಸ್‌ಗೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜನರಿಗೆ ಆಸೆ, ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಕ್ಕರ್, ಇಸ್ತ್ರಿಪೆಟ್ಟಿಗೆ, ಗಿಫ್ಟ್‌ ಕಾರ್ಡ್‌, ಹಂಚಿಕೊಂಡು ನಡೆಸಿರುವ ಚುನಾವಣೆ ಇದು, ಗಿಫ್ಟ್‌ ಹಂಚಿಕೊಂಡೆ ಎಲೆಕ್ಷನ್‌ ನಡೆಸಿದ್ದಾರೆ. ವಾಮಮಾರ್ಗದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಚುನಾವಣಾ ಆಯೋಗ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Previous articleಕುಕ್ಕರ್, ಐರನ್ ಬಾಕ್ಸ್ ಹಂಚಿಕೆಯಿಂದ ಗೆಲುವು ಸಾಧ್ಯವಾಗಿದೆ
Next articleಬೆಕ್ಕಿನ ಕಣ್ಣಿನ ಹಾವು ಪತ್ತೆ