ವಿಶೇಷ ವರದಿ ಪಿ. ವೈ ರವಿಂದ್ರ ಹೇರ್ಳೆ
ರಾಮನಗರದಲ್ಲಿ ರಾಜ್ಯರಾಜಧಾನಿಯ ಒತ್ತಡ ಕಡಿಮೆ ಮಾಡಲು ಹಾಗೂ ಬೆಂಗಳೂರಿನ ಮುಂದಿನ ವ್ಯವಹಾರ ಕೇಂದ್ರ ಸ್ಥಾಪನೆಯ ಉದ್ದೇಶದಿಂದಾಗಿ ರಾಜ್ಯ ಸರ್ಕಾರ ದೇಶದ ಮೊಲದ ಇಂಟಿಗ್ರೇಟೆಡ್ ಕೃತಕ ಬುದ್ಧಿಮತ್ತೆ(ಎಐ)ನಗರವನ್ನು ನಿರ್ಮಾಣ ಮಾಡಲಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಮಿಸಲು ಈ ನಗರ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈ ನಗರವೂ ಕೆಲಸ-ವಾಸ ಮತ್ತು ಉಲ್ಲಾಸವನ್ನು ಹೊಂದುವುದರ ಜತೆಗೆ, ಸ್ಥಳೀಯ ಪ್ರವೇಶಾಭಿವೃದ್ಧಿ ಪರಿಕಲ್ಪನೆಯನ್ನು ಹೊಂದಿದೆ.
ಕೃತಕ ಬುದ್ಧಿಮತ್ತೆ ನಗರ ನಿರ್ಮಾಣ ವ್ಯಾಪಾರ ಮತ್ತು ಆರ್ಥಿಕತೆಗೆ ಉತ್ತೇಜನ, ಉದ್ಯೋಗಾವಕಾಶಗಳು, ಕೌಶಲ ಕೇಂದ್ರದ ಸ್ಥಾಪನೆ, ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ಜತೆಗೆ, ಜೀವನಮಟ್ಟ ಸುಧಾರಣೆಯನ್ನು ಗುರಿ ಹೊಂದಿದೆ.
ಏನೆಲ್ಲಾ ಸೌಲಭ್ಯಗಳು ಲಭಿಸಲಿದೆ?: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಡಿಯಲ್ಲಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‍ಶಿಪ್‍ನಲ್ಲಿ ದೇಶದ ಮೊದಲ ಎಐ ನಗರವನ್ನು ನಿರ್ಮಿಸಲಾಗುತ್ತಿದೆ. ಇದು ಮುಂದಿನ ದಿನದಲ್ಲಿ ಬೆಂಗಳೂರಿನ ಎರಡನೇ ಕೇಂದ್ರ ವ್ಯವಹಾರ ಜಿಲ್ಲೆಯಂತೆ ಸ್ಥಾಪನೆ ಮಾಡುವ ಗುರಿ ಇದೆ.
ಜಾಗತಿಕ ಹೂಡಿಕೆದಾರರು ಹಾಗೂ 200ರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಎಐ ಆಧಾರಿತ ಉದ್ದಿಗೆ ಮೀಸಲಿಡಲಾಗುತ್ತಿದೆ. ಎಐ ಕೈಗಾರಿಕೆಗಳು, ಐಟಿ ಸ್ಟಾರ್ಟ್ಅಪ್‍ಗಳೂ ಮತ್ತು ಸೇವಾ ಕ್ಷೇತ್ರದಲ್ಲಿ ಲಕ್ಷಾಂರ ಹೊಸ ಉದ್ಯೋಗ ಸ್ಥಾಪನೆ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 70 ಮೀಟರ್ ಅಗಲದ ಮುಖ್ಯ ರಸ್ತೆ, ರಿಂಗ್ ರೋಡ್‍ಗಳು ಎಕ್ಸ್‌ಪ್ರೆಸ್ ಲಿಂಕ್‍ಗಳೊಂದಿಗೆ ಸಂಪರ್ಕ ಕಲ್ಪಿಸಿಕೊಡಲಾಗುತ್ತದೆ. ಜೊತೆಗೆ ಗೃಹ ನಿರ್ವಹಣೆ, ಆರೋಗ್ಯ ಸೇವೆ, ಶಿಕ್ಷಣ ಸಂಸ್ಕೃತಿಯು ಈ ಎಐ ನಗರ ಒಳಗೊಮಂದೆ.
ಇಂಟ್ರಿಗ್ರೇಟೆಡ್ ಟೌನ್‍ಶಿಪ್ ಮಾದರಿಯಲ್ಲಿ 1,100 ಎಕರೆಕ್ಕೂ ಹೆಚ್ಚು ಪ್ರದೇಶದಲ್ಲಿ ಉದ್ಯಾನವಗಳು ಮತ್ತು ಮೈದಾನ, ಹಸಿರು ಮತ್ತು ಸುಸ್ಥಿರ ನಗರವನ್ನು ಸ್ಥಾಪನೆ ಇದರ ಮತ್ತೊಂದು ಉದ್ದೇಶವಾಗಿದೆ.
“ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಯ ಭೂ ಸಂತ್ರಸ್ತ ರೈತರಿಗೆ ಆಯಾ ಜಮೀನಿನ ಮಾನದಂಡದ ಆಧಾರದ ಮೇಲೆ ಪ್ರತಿ ಎಕರೆಗೆ 1.50 ಕೋಟಿಯಿಂದ 2.50 ಕೋಟಿವರೆಗೂ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ನಮ್ಮ ಊರಿನ ಜನ ಬೆಂಗಳೂರಿಗೆ ಹೋಗುವ ಬದಲು, ನಮ್ಮ ಊರಿನಲ್ಲೇ ಬೆಂಗಳೂರನ್ನು ಕಾಣಬೇಕು” ಡಿ.ಕೆ.ಶಿವಕುಮಾರ್. ಡಿಸಿಎಂ
ಪ್ರದೇಶದ ವಿವರಗಳು
- ಒಟ್ಟು ಗ್ರಾಮಗಳ ಸಂಖ್ಯೆ 9
- ಯೋಜನೆಯ ಒಟ್ಟು ಪ್ರದೇಶ 8493 ಎಕರೆ
- ಖಾಸಗಿ ಜಮೀನು 6731 ಎಕರೆ
- ಸರ್ಕಾರಿ ಜಮೀನು 750 ಎಕರೆ
- ಆಲಮೂಲ ಪ್ರದೇಶ 1012 ಎಕರೆ
- ಯೋಜನೆಗೆ ಆರ್ಥಿಕ ಸಂಪನ್ಮೂಲ ಆಂತರಿಕ ಸಂಪನ್ಮೂಲ 2950 ಕೋಟಿ
- ಬಾಲ್ಯ ಸಂಪನ್ಮೂಲ 17500 ಕೋಟಿ
- ಒಟ್ಟು ವೆಚ್ಚ 20,000ರ ಕೋಟಿಗೂ ಅಧಿಕ
ಹಳ್ಳಿಗಳ ಅಭಿವೃದ್ಧಿ: ಹಳ್ಳಿಗಳ ಅಭಿವೃದ್ಧಿಯು ಯೋಜನೆ ಮುಖ್ಯ ಉದ್ದೇಶವನ್ನಾಗಿ ಮಾಡಲಾಗಿದೆ. ಇದರಿಂದ ಹಳ್ಳಿಯ ಸುತ್ತಮುತ್ತ 50 ಮಿ.ರಿಂಗ್ ರಸ್ತೆ. ಕರ್ನಾಟಕ ಪಬ್ಲಿಕ್ ಶಾಲಾ ಸೌಲಭ್ಯ, ನವೀಕರಿಸಿದ ಆಸ್ಪತ್ರೆ, ಗ್ರಾಮಗಳಿಗೆ ಒಳಚರಂಡಿ ವ್ಯವಸ್ಥೆ, ಎಲ್ಲಾ ಋತುಮಾನದ ಉತ್ತಮ ರಸ್ತೆಗಳು, ಭೂಗತ ವಿದ್ಯುತ್ ಕೇಬಲ್‍ಗಳು, ಆಟದ ಮೈದಾನ, ಉದ್ಯಾನಗಳು, ಸರ್ಕಾರಿ ಕಚೇರಿ ಮತ್ತು ಸೇವಾ ಕೇಂದ್ರಗಳಿಗೆ ಜಾಗ. ಧಾರ್ಮಿಕ ಸ್ಥಳದ ಅಭಿವೃದ್ಧಿ, ಹಳ್ಳಿಯ ಚುಟುವಟಿಕೆಗಳಿಗೆ ಬಯಲು ಜಾಗ, ಅಧುನಿಕ ಶವ ಸಂಸ್ಕಾರಕ್ಕೆ ಜಾಗ ಲಭಿಸಲಿದೆ.
ರೈತರಿಂದ ವಿರೋಧ ಇನ್ನು ಬಿಡದಿ ಸ್ಮಾರ್ಟ್ ಸಿಟಿ ಭೂ ಸ್ವಾಧೀನ ಪ್ರಕ್ರಿಯೆಗೆ ಸ್ಥಳೀಯ ರೈತರು ಮೊದಲಿನಿಂದ ವಿರೋಧಿಸಿಕೊಂಡು ಬರುತ್ತಿದ್ದಾರೆ. ಇತ್ತೀಚಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಮಾರ್ಟ್ ಸಿಟಿಯ ಲಾಂಛನ ಆನಾವರಣಗೊಳಿಸಿದ ಬಳಿಕ ಕೆಲವರು ಡಿಸಿಎಂ ನಿರ್ಧಾರವನ್ನು ಸ್ವಾಗತಿಸಿದರೆ, ಮತ್ತೆ ಹಲವರು ಯೋಜನೆಗೆ ವಿರೋಧಿಸುತ್ತಲೇ ಬರುತ್ತಿದ್ದಾರೆ. ಇದರಿಂದ ಸಾವಿರಾರು ನೀರಾವರಿ ಭೂಮಿ ವ್ಯರ್ಥವಾಗಲಿದೆ. ಇಡೀ ಹಳ್ಳಿಯನ್ನೇ ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ. ರೈತಾಪಿ ವರ್ಗಕ್ಕೆ ಸಾಕಷ್ಟು ತೊಂದರೆಯಾಗಲಿದೆ ಎಂಬುದು ಅವರ ಆರೋಪ.
“ದೇಶದ ಮೊದಲ ಕೃತಕ ಬುದ್ಧಿಮತ್ತೆ(ಎಐ)ನಗರಕ್ಕೆ ರೈತರ ಪಾಲುದಾರರಾಗಬೇಕು ಎಂಬುದು ನಮ್ಮ ಉದ್ದೇಶ. ರೈತರನ್ನು ಜೊತೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಅದಕ್ಕಾಗಿಯೇ 50:50 ರೆಶ್ಯೋ ಸಹ ನೀಡಿದ್ದೇವೆ” ಗಾಣಕಲ್ ನಟರಾಜು, ಅಧ್ಯಕ್ಷ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ.