ನಿಖಿಲ್‌ಗೆ ಸೋಲು: ವಿಷ ಸೇವಿಸಿದ ಅಭಿಮಾನಿ

0
67

ರಾಮನಗರ: ನಿಖಿಲ್ ಕುಮಾರಸ್ವಾಮಿ ಸೋಲು ಕಂಡ ಹಿನ್ನಲೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಕೂಡೂರು ಸಮೀಪ ಶ್ರೀರಾಮಪುರದಲ್ಲಿ ನಡೆದಿದೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡ ಹಿನ್ನಲೆ ಅವರ ಕಟ್ಟಾ ಅಭಿಮಾನಿ ಮಂಜುನಾಥ (36) ಎಂಬಾತ ‘ನಾನು ನಿಖಿಲ್ ಅಭಿಮಾನಿ, ನನ್ನ ಸಾವಿಗೆ ನಾನೇ ಕಾರಣ, ಜೈ ಜೆಡಿಎಸ್ʼ ಎಂದು ಪತ್ರ ಬರೆದಿಟ್ಟು ವಿಷ ಸೇವಿಸಿದ್ದಾನೆ ಎಂದು ಹೇಳಲಾಗಿದೆ.
ತೀವ್ರ ಅಸ್ವಸ್ಥನಾಗಿರುವ ಮಂಜುನಾಥನನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Previous articleIND vs AUS:  ಬೃಹತ್ ಮುನ್ನಡೆಯತ್ತ ಭಾರತ
Next articleಜಾನುವಾರು ಕಳವು ಯತ್ನ: ಇಬ್ಬರು ಪೊಲೀಸರ ವಶಕ್ಕೆ