ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ: 14 ಕಡೆ ಪ್ರವೇಶ, ನಿರ್ಗಮನ ದ್ವಾರ

0
53

ವಿಶೇಷ ವರದಿ: ಪಿ. ವೈ ರವಿಂದ್ರ ಹೇರ್ಳೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ವಾಹನ ಸವಾರರಿಗೆ ಮಾಹಿತಿಯೊಂದಿದೆ. ಆಕ್ಸಿಸ್ ಕಂಟ್ರೋಲ್ ಹೊಂದಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿನ ಪ್ರವೇಶ ಮತ್ತು ನಿರ್ಗಮನ ದ್ವಾರಗಳೊಂದಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳಿಗಾಗಿ 712 ಕೋಟಿ ರೂ.ಗಳು ಬಿಡುಗಡೆಯಾಗಿದೆ.

ಸುಮಾರು 9 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 118 ಕಿ.ಮೀ.ಉದ್ದದ 6 ಪಥದ ಎಕ್ಸ್‌ಪ್ರೆಸ್‌ ವೇನಲ್ಲಿ ನಿತ್ಯ ಅಪಘಾತಗಳು ಸರ್ವೇ ಸಾಮಾನ್ಯ. 3 ವರ್ಷಗಳ ಹಿಂದೇ ಲೋಕಾರ್ಪಣೆಗೊಂಡ ಈ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳೇ ಇರಲಿಲ್ಲ. ಬಸ್ ಶೆಲ್ಟರ್, ಮೇಲ್ಸೇತುವೆ, 2 ಕಡೆಗಳಲ್ಲಿ ಸರ್ವಿಸ್ ರಸ್ತೆ ಕಡಿತ..ಹೀಗೆ ಅನೇಕ ಸಮಸ್ಯೆಗಳಿದ್ದವು.

ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ 2.017 ಕಿ.ಮೀ. ನಷ್ಟು ದೂರದ ಕಾಮಗಾರಿಗಳಿಗೆ 711.72 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಹೆದ್ದಾರಿ ಪ್ರಾಧಿಕಾರವು 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಹೆದ್ದಾರಿಯ ಬದಿಯಲ್ಲಿ ಒಟ್ಟು 22.536 ಕಿ.ಮೀ.ನಷ್ಟು ದೂರದ ನೂತನ ಸರ್ವಿಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಓವರ್‌ ಬೈಪಾಸ್, ಅಂಡರ್ ಬ್ರಿಡ್ಜ್ ನೊಂದಿಗೆ ಒಟ್ಟು 14 ಕಡೆಗಳಲ್ಲಿ ಹೆದ್ದಾರಿಗೆ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ತಲೆ ಎತ್ತಲಿವೆ.

ಕಾಮಗಾರಿಗಳು ಏಕೆ?: ಕಳೆದ 3 ವರ್ಷಗಳ ಹಿಂದೆ ಎಕ್ಸ್‌ಪ್ರೆಸ್ ವೇ ಸಂಚಾರಕ್ಕೆ ಮುಕ್ತಗೊಂಡಿದೆ. ಆದರೆ, ಬಿಡದಿ ಹಾಗೂ ಮಂಡ್ಯದ ಬಳಿ ಸರ್ವೀಸ್ ರಸ್ತೆಗಳ ಕಾಮಗಾರಿ ನಡೆದಿರಲಿಲ್ಲ. ಹೆದ್ದಾರಿಗೆ ಎಂಟ್ರಿ-ಎಕ್ಸಿಟ್ ಪಡೆಯುವ ಜಾಗಗಳು ಅವೈಜ್ಞಾನಿಕವಾಗಿ ಕೂಡಿತ್ತು ಎಂಬ ಆರೋಪಗಳಿದ್ದವು. ಎಂಟ್ರಿ-ಎಕ್ಸಿಟ್ ಸ್ಥಳಗಳಲ್ಲಿಯೇ ಹೆಚ್ಚಿನ ಆಕ್ಸಿಡೆಟ್ ನಡೆಯುತ್ತಿತು. ಈ ಎಂಟ್ರಿ-ಎಕ್ಸಿಟ್ ಸ್ಥಳಗಳನ್ನು ಹೆಚ್ಚಿಸುವ ಬೇಡಿಕೆಗಳು ಇದ್ದವು.

ಹೆದ್ದಾರಿ ದಾಟಲು ಅಂಡರ್‌ಪಾಸ್, ಫ್ಲೈ ಓವರ್‌ಗಳ ಕೊರತೆಯು ಹೆಚ್ಚಾಗಿತ್ತು. ಈ ಬಗ್ಗೆ ಪೊಲೀಸ್ ಇಲಾಖೆ ಮಾತ್ರವಲ್ಲದೇ, ಹೆದ್ದಾರಿ ಪ್ರಾಧಿಕಾರ ನಡೆಸಿದ ಸರ್ವೆಗಳಲ್ಲಿಯು ಬೆಳಕಿಗೆ ಬಂದಿತ್ತು. ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಯಾಣಿಸಿದ ದೂರಕ್ಕೆ ಟೋಲ್ ಪಾವತಿಸುವ ವ್ಯವಸ್ಥೆಯೇ ಇಲ್ಲಿರಲಿಲ್ಲ. ಈ ಎಲ್ಲಾ ಯೋಜನೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದ್ದಾರೆ.

ಎರಡು ವರ್ಷಗಳಲ್ಲಿ ಟೋಲ್ ಬದಲಾವಣೆ: ನೂತನ ಯೋಜನೆಯಲ್ಲಿ ಒಟ್ಟು 14 ಕಡೆಗಳಲ್ಲಿ ಎಂಟ್ರಿ-ಎಕ್ಸಿಟ್‌ಗಳನ್ನು ನೀಡಲಾಗುವುದು. ಈ ಪ್ರದೇಶಗಳ ಎರಡು ಬದಿಗಳಲ್ಲಿಯು ನೂತನ ಟೋಲ್ ಬೂತ್ ಸಹ ಪ್ರಾರಂಭಗೊಳ್ಳಲಿದೆ. ಹೀಗಾಗಿ ಪ್ರಯಾಣಿಕರು ಹೆದ್ದಾರಿ ಪ್ರವೇಶಿಸಿ, ನಿರ್ಗಮಿಸುವ ದೂರಕ್ಕೆ ಮಾತ್ರ ಟೋಲ್ ದರ ಪಾವತಿಸಬಹುದಾಗಿದೆ. ಜತೆಗೆ ಹೆದ್ದಾರಿಯಲ್ಲಿ 35 ಕಡೆ ಬಸ್ ಶೆಲ್ಟರ್, 2 ಕಡೆ ಟ್ರಕ್ ಬೇ ನಿರ್ಮಾಣಗೊಳ್ಳಲಿದೆ. ಇದರಿಂದಾಗಿ ಬೃಹತ್ ವಾಹನ ಸವಾರರಿಗೆ ಅನುಕೂಲವಾಗಿದೆ.

ಈ ಕುರಿತು ಮಾತನಾಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್, “ಎಕ್ಸ್‌ಪ್ರೆಸ್‌ ವೇನಲ್ಲಿ ಎಂಟ್ರಿ-ಎಕ್ಸಿಟ್ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸಾರಿಗೆ ಸಚಿವರೊಂದಿಗೆ ಮನವಿ ಮಾಡಿಕೊಂಡಿದ್ದೆ. ಈ ಮನವಿಗೆ ಸ್ಪಂದಿಸಿ, 712 ಕೋಟಿ ರೂ.ಗಳ ಹೆಚ್ಚುವರಿ ಕಾಮಗಾರಿಗೆ ಕೇಂದ್ರ ಸಚಿವರು ಶಂಕುಸ್ಥಾಪನೆ ನೆರೆವೇರಿಸಿದ್ದಾರೆ. ಅವರಿಗೆ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೆನೆ” ಎಂದು ಹೇಳಿದ್ದಾರೆ.

Previous articleಧರ್ಮಸ್ಥಳ ಪ್ರಕರಣ: ಎನ್‌ಐಎ ತನಿಖೆಗೆ ಆಗ್ರಹಿಸಿ ಅಮಿತ್ ಶಾ ಭೇಟಿಯಾದ ಸ್ವಾಮೀಜಿಗಳ ನಿಯೋಗ
Next articleಕೋಲಾರ: ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಗೆ ಚಾಲನೆ

LEAVE A REPLY

Please enter your comment!
Please enter your name here