ಶುಭ ಕೋರಿದವರಿಗೆ ನೋಟಿಸ್

0
31
ಬೋಪಯ್ಯ

ಮಡಿಕೇರಿ: ಪಕ್ಷದ ಚಿಹ್ನೆ ಬಳಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ್ದ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಚುನಾವಣಾ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಹತ್ತನೇ ತರಗತಿ ಪರೀಕ್ಷೆಗಳು ಆರಂಭವಾದ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ ಬೋಪಯ್ಯ ಫೇಸ್‍ಬುಕ್ ಖಾತೆಯಲ್ಲಿ ಪಕ್ಷದ ಚಿಹ್ನೆ ಬಳಸಿ ಶುಭ ಹಾರೈಸಿದ್ದರು. ಈ ಬಗ್ಗೆ 24 ಗಂಟೆಯೊಳಗೆ ಉತ್ತರಿಸುವಂತೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಮತ್ತೋರ್ವ ಸಚಿನ್ ಚೆರಿಯಪಂಡ ಎನ್ನುವವರು ಜನರಲ್ ತಿಮ್ಮಯ್ಯ ಜನ್ಮದಿನ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಬಳಸಿ ಶುಭಾಶಯ ಕೋರಿದ್ದರಿಂದ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

Previous articleಮತ ಎಣಿಕೆ ಕೇಂದ್ರ: ಸ್ಥಳ‌ ಪರಿಶೀಲಿಸಿದ ಜಿಲ್ಲಾಧಿಕಾರಿ
Next articleಕನ್ನಡದಲ್ಲಿ ಬೆಂಗಳೂರು ಶ್ಲಾಘಿಸಿದ ಪ್ರಧಾನಿ