ಪಣಜಿ: ಸೇವ್‌ಪುರಿ ತಿಂದ ಯುವಕ ಸಾವು

0
107

ಪಣಜಿ: ಗೋವಾದ ಮಡಗಾಂವ ಸ್ಟೇಡಿಯಂ ಬಳಿ ಸೇವ್‌ಪುರಿ ತಿಂದ 35 ವರ್ಷದ ವ್ಯಕ್ತಿ ಇದ್ದಕ್ಕಿದ್ದಂತೆಯೇ ವಾಂತಿಯಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಪ್ರಸಾದ ಪರಿತ್ (35) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಈತ ಮಹಾರಾಷ್ಟ್ರದ ದೋಡಾಮಾರ್ಗದವನು ಎನ್ನಲಾಗಿದೆ.

ಪ್ರಸಾದನನ್ನು ಕೂಡಲೇ ದಕ್ಷಿಣ ಗೋವಾ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ಆತ ಸಾವನ್ನಪ್ಪಿದ. ನಂತರ ವೈದ್ಯರು ಈತನು ಸಾವನ್ನಪ್ಪರುವುದನ್ನು ಖಚಿತಪಡಿಸಿದರು.

ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳೀಯ ಪೊಲೀಸ್‌ರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸಾದನ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ಆರಂಭಿಸಲಾಗಿದೆ.

ಫಾರೆನ್ಸಿಕ್ ವರದಿ ಬಂದ ನಂತರ ಸಾವಿನ ನಿರ್ದಿಷ್ಟ ಕಾರಣ ತಿಳಿದುಬರಲಿದೆ. ಪ್ರಸಾದ ಸೇವ್‌ಪುರಿ ಸೇವಿಸಿದ ನಂತರ ಸಾವನ್ನಪ್ಪಿರುವುದರ ಘಟನೆಯಿಂದಾಗಿ ಸ್ವಚ್ಛತೆಯ ಪ್ರಶ್ನೆ ಕೂಡ ಉದ್ಭವಿಸಿದೆ. ರಸ್ತೆಯ ಬದಿಯಲ್ಲಿ ಆಹಾರ ಸೇವಿಸುವುದಕ್ಕೆ ಜನ ಆತಂಕಪಡುವಂತಾಗಿದೆ.

Previous articleವಿಜಯಪುರ: ಭೀಮೆ ಪ್ರವಾಹ – ಸಂತ್ರಸ್ತರ ಸ್ಥಳಾಂತರ, ಹೆದ್ದಾರಿ ಬಂದ್
Next articleಬೆಳಗಾವಿ: ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ – ಆರೋಪಿಗೆ ಗಲ್ಲು

LEAVE A REPLY

Please enter your comment!
Please enter your name here