ಜೋಗ ಮತ್ತು ಗೋಕಾಕ್ ಫಾಲ್ಸ್‌ಗೆ ವಿಶೇಷ ಬಸ್, ವೇಳಾಪಟ್ಟಿ

0
18

ಜೋಗ ಮತ್ತು ಗೋಕಾಕ್ ಫಾಲ್ಸ್‌ಗೆ ಪ್ರವಾಸ ಹೋಗುವ ಜನರಿಗೆ ಸಿಹಿಸುದ್ದಿ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿಯಿಂದ ಎರಡೂ ಪ್ರವಾಸಿ ತಾಣಗಳಿಗೆ ವಿಶೇಷ ಬಸ್‌ಗಳನ್ನು ಓಡಿಸುತ್ತಿದೆ.

ಬಳ್ಳಾರಿಯಿಂದ ಜೋಗ್ ಫಾಲ್ಸ್ ಮತ್ತು ಗೋಕಾಕ್ ಫಾಲ್ಸ್ ಪ್ರವಾಸಿ ತಾಣಗಳಿಗೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ ವಿಶೇಷ ವೇಗದೂತ ಸಾರಿಗೆ ಸೌಲಭ್ಯವನ್ನು ಬಳ್ಳಾರಿ ವಿಭಾಗದಿಂದ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಬಳ್ಳಾರಿ-ಜೋಗ ಬಸ್: ಬಳ್ಳಾರಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟು, ಮಧ್ಯಾಹ್ನ 2 ಗಂಟೆಗೆ ಜೋಗಕ್ಕೆ ತಲುಪಲಿದೆ (ವಯಾ ಬಳ್ಳಾರಿ-ಚಳ್ಳಕೆರೆ-ಚಿತ್ರದುರ್ಗ-ಚನ್ನಗಿರಿ-ಶಿವಮೊಗ್ಗ-ಸಾಗರ-ಜೋಗ).

ಜೋಗದಿಂದ ರಾತ್ರಿ 8 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಬಳ್ಳಾರಿಗೆ ಬಸ್ ತಲುಪಲಿದೆ. ಪ್ರಯಾಣ ದರ ರೂ. 570. ಈ ವಿಶೇಷ ಬಸ್ ಸೆ.13ರಿಂದ ಪ್ರತಿ ಶನಿವಾರ ಮತ್ತು ಪ್ರತಿ ಭಾನುವಾರ ಸಂಚಾರ ನಡೆಸಲಿದೆ.

ಬಳ್ಳಾರಿ-ಗೋಕಾಕ್ ಫಾಲ್ಸ್: ಬಳ್ಳಾರಿಯಿಂದ ಬೆಳಗ್ಗೆ 6 ಗಂಟೆಗೆ ಹೊರಟು, ಮಧ್ಯಾಹ್ನ 01.15ಕ್ಕೆ ಗೋಕಾಕ್ ಫಾಲ್ಸ್‌ಗೆ ತಲುಪಲಿದೆ (ವಯಾ ಹೊಸಪೇಟೆ-ಕೊಪ್ಪಳ-ಗದಗ- ನವಲಗುಂದ-ನರಗುಂದ-ಹುಲಿಕಟ್ಟಿ-ಮನೊಳ್ಳಿ-ಯರಗಟ್ಟಿ-ಮಮದಾಪುರ).

ಗೋಕಾಕ್ ಫಾಲ್ಸ್ ನಿಂದ ರಾತ್ರಿ 8 ಗಂಟೆಗೆ ಅಲ್ಲಿಂದ ಹೊರಟು ಮರುದಿನ ಬೆಳಗ್ಗೆ 4ಗಂಟೆಗೆ ಬಳ್ಳಾರಿಗೆ ತಲುಪಲಿದೆ. ಪ್ರಯಾಣ ದರ ರೂ.515 ಆಗಿದೆ. ಈ ವಿಶೇಷ ಬಸ್‌ಗಳಲ್ಲಿ ಸಂಚಾರ ನಡೆಸಲು www.ksrtc.in ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಿ.

ಹೆಚ್ಚಿನ ಮಾಹಿತಿಗಾಗಿ 7760992163, 7760992164 ಮತ್ತು 7760992167 ಸಂಖ್ಯೆಗೆ ಸಂಪರ್ಕಿಸಿ. ಈ ವಿಶೇಷ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ಕರೆ ನೀಡಿದೆ.

Previous articleಐಸಿಸಿ ತಿಂಗಳ ಆಟಗಾರರ ಪ್ರಶಸ್ತಿ: ಸಿರಾಜ್ ನಾಮ ನಿರ್ದೇಶನ
Next articleಧಾರವಾಡ: ಹೆಸ್ಕಾಂ ವ್ಯಾಪ್ತಿಯ 37 ಲಕ್ಷ ಮನೆಗಳಿಗೆ ಸ್ಟಿಕರ್ ಅಂಟಿಸುವ ಕಾರ್ಯಕ್ಕೆ ಚಾಲನೆ

LEAVE A REPLY

Please enter your comment!
Please enter your name here