ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಪತ್ನಿಯ ತಲೆಬೋಳಿಸಿದ ಪತಿ..!

0
11

ಬಾಗಲಕೋಟೆ: ಕುಡಿದ ಮತ್ತಿನಲ್ಲಿ ಪತಿ ತನ್ನ ಪತ್ನಿಯ ಅರ್ಧ ತಲೆಬೋಳಿಸಿದ ಘಟನೆ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿರುವ ವರದಿಯಾಗಿದೆ.

ಬಸಪ್ಪ ದೇವರವರ ಹಾಗೂ ಪತ್ನಿ ಶ್ರೀದೇವಿ ದೇವರವರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಲೇಯಿತ್ತು. ಪತಿಯ ನಡವಳಿಕೆಯಿಂದ ಬೇಸತ್ತಿದ್ದ ಪತ್ನಿ ಶ್ರೀದೇವಿ ತವರು ಮನೆ ಸೇರಿದ್ದಳು ಎರಡು ತಿಂಗಳ ಬಳಿಕ ಸಖಿ ತಂಡದವರು ಆಪ್ತ ಸಮಾಲೋಚನೆ ನಡೆಸಿ ಶ್ರೀದೇವಿಯನ್ನು ಪತಿ ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಶನಿವಾರ ರಾತ್ರಿ ಮತ್ತೆ ಕುಡಿದು ಬಂದಿರುವ ಬಸಪ್ಪ ಪತ್ನಿಯೊಂದಿಗೆ ಜಗಳಕ್ಕೆ ಮುಂದಾಗಿದ್ದಾನೆ. ಅದು ವಿಕೋಪಕ್ಕೆ ತೆರಳಿ ಆಕೆಯ ತಲೆಬೋಳಿಸಿದ್ದಾನೆ ಎಂದು ತಿಳಿದು ಬಂದಿದೆ. ಶ್ರೀದೇವಿ ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಳೆ. ಜಮಖಂಡಿ ಗ್ರಾಮೀಣ ಪೊಲೀಸರು ಘಟನೆ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

Previous articleಕಾರವಾರ: ಕ್ರಿಮ್ಸ್‌ ಮಾಜಿ ನಿರ್ದೇಶಕ ಡಾ. ಗಜಾನನ ನಾಯಕ ವಿರುದ್ಧ ಕ್ರಮಕ್ಕೆ ಪ.ಜಾ ಆಯೋಗ ಸೂಚನೆ
Next articleಪೂರ್ಣ ಚಂದ್ರಗ್ರಹಣ ಎಂಬ ಭವ್ಯ ಪ್ರದರ್ಶನ

LEAVE A REPLY

Please enter your comment!
Please enter your name here