ಬಾಗಲಕೋಟೆ: ಗ್ಯಾಸ್ ಸಿಲಿಂಡರ್‌ ಸ್ಪೋಟ

0
18

ಬಾಗಲಕೋಟೆ: ಜಿಲ್ಲೆಯ ಬಾದಾಮಿಯಲ್ಲಿ ಗುರುವಾರ ರಾತ್ರಿ ಸಿಲಿಂಡರ್ ಸ್ಫೋಟಗೊಂಡು 6 ಜನ ಗಾಯಗೊಂಡಿದ್ದಾರೆ.
ಪುಲಿಕೇಶಿ ಬ್ಯಾಂಕ್ ಪಕ್ಕದ ಜಮಾದಾರ್ ಸೈಕಲ್ ಸ್ಟೋರ್ ನಲ್ಲಿ ಅಕ್ರಮವಾಗಿ ಪುಟ್ಟ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಬೆಂಕಿಯ ಕಿಡಿ ತಾಗಿ ಸಿಲಿಂಡರ್ ಸ್ಫೋಟ ಗೊಂಡಿವೆ. ಅಂಗಡಿ ಬಾಗಿಲು ತೆರೆಯಲು ಹೋದ ಮಾಲೀಕ ಸೇರಿದಂತೆ 6 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಬಾದಾಮಿ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಎಸ್ಪಿ ಸಿದ್ದಾರ್ಥ ಗೋಯಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Previous articleಧರ್ಮಸ್ಥಳ ಕೇಸ್: ಸುಜಾತಾ ಭಟ್‌ಗೆ ರಕ್ಷಣೆ ಕೊಡಿ ಎಸ್‌ಐಟಿಗೆ ಪತ್ರ
Next articleಗಣಿ ಗೋಲ್‌ಮಾಲ್: 6 ಬಂದರು ತನಿಖೆಗೆ ಸಿಬಿಐ ಹಿಂದೇಟೇಕೆ?

LEAVE A REPLY

Please enter your comment!
Please enter your name here