14ರಂದು ಸತೀಶ ಅಭಿಮಾನಿಗಳಿಂದ ಶಕ್ತಿ ಪ್ರದರ್ಶನ

0
11
Satish-Jarkiholi

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬಳಸಿದ ಹಿಂದೂ ಶಬ್ದದ ವಿವಾದ ಈಗ ಮತ್ತೇ ತಾರಕಕ್ಕೇರುವ ಲಕ್ಷಣಗಳು ಕಾಣಸಿಗುತ್ತಿವೆ.
ಸತೀಶ ಜಾರಕಿಹೊಳಿ ಆ ಶಬ್ದವನ್ನು ವಾಪಸ್‌ ಪಡೆದ ಮೇಲೂ ಕೂಡ ಬೆಳಗಾವಿ ಸೇರಿದಂತೆ ಬೇರೆ ಬೇರೆ ಕಡೆಗೆ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದರು.
ಈಗ ಅದಕ್ಕೆ ಟಕ್ಕರ್‌ ಕೊಡಲು ಪಕ್ಷವನ್ನು ದೂರವಿಟ್ಟು ಸತೀಶ ಜಾರಕಿಹೊಳಿ ಅಭಿಮಾನಿಗಳು ಇದೇ ದಿ.‌ 14ರಂದು ಬೆಳಗಾವಿಯಲ್ಲಿ ಭಾರೀ ಪ್ರಮಾಣದಲ್ಲಿ ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ಇದಕ್ಕೆ ಸುಮಾರು‌ 25 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದು ಗೊತ್ತಾಗಿದೆ.
ಬಿಜೆಪಿಯವರು ಅನಗತ್ಯವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಅವರ ತೇಜೋವಧೆ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಬೇಡಿಕೆ ಇಟ್ಟುಕೊಂಡು ಈ ಪ್ರತಿಭಟನೆ ನಡೆಯಲಿದೆ. ಅಂದು‌ ಬೆಳಿಗ್ಗೆ 10ಗಂಟೆಗೆ ಡಾ. ‌ಬಾಬಾಸಾಹೇಬ‌ ಅಂಬೇಡ್ಕರ್‌ ಉದ್ಯಾನದಿಂದ ಆರಂಭಗೊಳ್ಳುವ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಂಚರಿಸಲಿದೆ.

Previous articleಸಂಸದ ಕಡಾಡಿ ಕಾರು ಅಡ್ಡಗಟ್ಟಿ ಪ್ರತಿಭಟನೆ
Next articleಚಲಿಸುವ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ