ಮಂತ್ರಾಲಯದ ಶ್ರೀರಾಯರ ಮಠದಿಂದ ಬಡ ರೈತರಿಗೆ ಹೋರಿಗಳ ಉಚಿತ ವಿತರಣೆ

0
20
ರಾಯರ ಮಠ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಸೋಮವಾರ ಬಡ ರೈತರಿಗೆ ಉಚಿತವಾಗಿ ಹೋರಿಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಮೂಲಕ ಲಾಟರಿ ಮೂಲಕ ರೈತರನ್ನು ಆಯ್ಕೆ ಮಾಡಿ ಹೋರಿಗಳನ್ನು ಹಸ್ತಾಂತರಿಸಿದರು. ನಂತರ ಅನುಗ್ರಹ ಸಂದೇಶ ನೀಡಿದ ಶ್ರೀಪಾದಂಗಳವರು, ಕೃಷಿ ಚಟುವಟಿಕೆಗಳಿಗಾಗಿ ಹೋರಿಗಳನ್ನು ಉಪಯೋಗಿಸಬೇಕು ಯಾವುದೇ ಕಾರಣಕ್ಕೂ ಕಸಾಯಿಖಾನೆಗೆ ಇನ್ನಿತರ ಕಡೆಗೆ ಹೋರಿಗಳನ್ನು ಮಾರಾಟ ಮಾಡಬಾರದು. ರೈತರ ಹೋರಿಗಳನ್ನು ಸರಿಯಾಗಿ ರಕ್ಷಣೆ ಮಾಡಬೇಕು. ತಮಗೆ ಹೋರಿಗಳ ರಕ್ಷಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಪುನಃ ಶ್ರೀಮಠಕ್ಕೆ
ಹಸ್ತಾಂತರಿಸಬೇಕು ಎಂದು ಎಂದು ರೈತರಿಗೆ ತಿಳಿಸಿದರು.
ಮಂತ್ರಾಲಯದ ಕ್ಷೇತ್ರದ ಶಾಸಕ ವೈ.ಬಾಲನಾಗರೆಡ್ಡಿ ಹಾಗೂ ಶ್ರೀಮಠದ ಅಧಿಕಾರಿಗಳು, ಪಂಡಿತರು ಹಾಗೂ ಮತ್ತಿತರರಿದ್ದರು.

Previous articleಪಕ್ಷವನ್ನು ಕಟ್ಟಲು ಆಗದವರು ಸರಕಾರ ರಚಿಸುತ್ತಾರಾ: ಕಟೀಲ್
Next articleಪರಮಾರ್ಥದಲ್ಲಿ ಏಕ – ವ್ಯವಹಾರದಲ್ಲಿ ಅನೇಕ