ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಡಾ. ಆನಂದ್ ಕೆ. ಅವರನ್ನು ವಿಜಯಪುರ ಜಿಲ್ಲಾಧಿಕಾರಿಯಾಗಿ ಸರಕಾರ ನಿಯೋಜಿಸಿದೆ. ಡಾ. ಆನಂದ್ ಕೆ ಅವರ ವರ್ಗಾವಣೆಯಿಂದ ತೆರವಾಗಲಿರುವ ದ.ಕ. ಜಿ.ಪಂ ಸಿಇಒ ಹುದ್ದೆಗೆ 2021ರ ಬ್ಯಾಚ್‌ನ ಐಎಎಸ್ ಅಧಿಕಾರಿ ಹಾಗೂ ಮಡಿಕೇರಿ ಉಪವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿರುವ ನರ್ವಾಡೆ ವಿನಾಯಕ್ ಕರ್ಭಾರಿ ಅವರನ್ನು ನಿಯೋಜಿಸಲಾಗಿದೆ.