ಸಾಮಾಜಿಕ ಕಾರ್ಯಕರ್ತ ಬಂಧನ ಬಿಡುಗಡೆ

0
32
ಸಾಮಾಜಿಕ ಕಾರ್ಯಕರ್ತ ಬಂಧನ ಬಿಡುಗಡೆ

ಸಂ.ಕ. ಸಮಾಚಾರ ಮಂಗಳೂರು: ʻನಮೀಬಿಯಾ ಚೀತಾಗೆ ಸೀಮಂತ ಯಾವಾಗ?’ ಗರ್ಭಿಣಿಯರಿಗೆ ಅವಮಾನ ಮಾಡಿದ ಆರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಎಂಬಾತನನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ್ದಾರೆ.
ಮಹಿಳೆಯರಿಗೆ ಅವಮಾನ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಕಳೆದ ರಾತ್ರಿ ಬಂಧಿಸಲಾಗಿದೆ.
ಸುನಿಲ್ ಬಜಿಲಕೇರಿ ಫೇಸ್‌ಬುಕ್‌ನಲ್ಲಿ ಗರ್ಭಿಣಿಗೆ ಚೀತಾ ಮುಖ ಜೋಡಿಸಿ ʻನಮೀಬಿಯಾ ಚೀತಾಗೆ ಸೀಮಂತ ಯಾವಾಗ?’ ಎಂದು ಬರೆದಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸುನಿಲ್ ಬಜಿಲಕೇರಿಯನ್ನು ಬಂಧಿಸಲು ಹೋದಾಗ ಆತ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಈ ಬಗ್ಗೆ ಮತ್ತೊಂದು ಪ್ರಕರಣ ದಾಖಲಾಗಿತ್ತು.
ಆರೋಪಿ ವಿರುದ್ಧ ಬಜಪೆ ಮತ್ತು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

Previous articleಜಾತಿ ಆಧಾರಿತ ಚುನಾವಣೆ… ಹೂಗಾರರು ಎಷ್ಟಿದ್ದೀರಿ?
Next articleವೀರಯೋಧನ ವೃತ್ತಕ್ಕೆ ಹಸಿರು ಹೊದಿಕೆ ಆಕ್ರೋಶ