ಸಂ.ಕ ಕಚೇರಿಯಲ್ಲಿ ಚಿಣ್ಣರ ಕಲರವ, ಸ್ವರ್ಣ ಸಂಭ್ರಮ

0
15

ಹುಬ್ಬಳ್ಳಿ: ಸಂಯುಕ್ತ ಕರ್ನಾಟಕ' ದಿನ ಪತ್ರಿಕೆ ತನ್ನ ಓದುಗರಿಗಾಗಿ ಪ್ರತಿಷ್ಠಿತ ಗುಜ್ಜಾಡಿ ಸ್ವರ್ಣ ಜ್ಯುವೆಲರ್ಸ್ ಸಹಯೋಗದಲ್ಲಿ ಆಯೋಜಿಸಿದ್ದಸ್ವರ್ಣ ಸಂಭ್ರಮ’ ಲಕ್ಕಿ ಡ್ರಾ ಹಾಗೂ ಗಣೇಶೋತ್ಸವ ಪ್ರಯುಕ್ತ ಮಕ್ಕಳಿಗಾಗಿ ಏರ್ಪಡಿಸಿದ್ದ ಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ' ಸ್ಪರ್ಧೆ ವಿಜೇತರಿಗೆ ಸೋಮವಾರ ಬಹುಮಾನ ವಿತರಿಸಲಾಯಿತು. ಸಂಯುಕ್ತ ಕರ್ನಾಟಕ’ ಕಚೇರಿ ಆವರಣದ ಕಬ್ಬೂರ ಸಭಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ದತ್ತಾ ಇನ್ಫಾçಸ್ಟçಕ್ಚರ್ ಮಾಲೀಕ ಪ್ರಕಾಶ ಜೋಶಿ, ಹುಬ್ಬಳ್ಳಿ-ಧಾರವಾಡ ಬಂಟರ್ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಹಾಗೂ ಸ್ವರ್ಣ ಸಮೂಹ ಸಂಸ್ಥೆಗಳ ಪಾಲುದಾರ ಗುಜ್ಜಾಡಿ ಗೋಪಾಲ ನಾಯಕ ಅವರು ಅದೃಷ್ಟಶಾಲಿಗಳಿಗೆ ಬಹುಮಾನ ವಿತರಿಸಿದರು.
ಆಗಸ್ಟ್ ೨೪ರಿಂದ ಸೆಪ್ಟೆಂಬರ್ ೨೩ರ ವರೆಗೆ ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ಪ್ರಕಟಗೊಂಡ ಕೂಪನ್‌ಗಳಲ್ಲಿ ಮಾಹಿತಿ ತುಂಬಿ ಸಲ್ಲಿಸಿದವರ ಪೈಕಿ ೨೫ ಅದೃಷ್ಟಶಾಲಿಗಳನ್ನು ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಶೇಷ ೧೦ ಅದೃಷ್ಟಶಾಲಿಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಯಿತು. ವಿಜೇತರಿಗೆ ಸ್ವರ್ಣ ಜ್ಯುವೆರ‍್ಸ್ ವತಿಯಿಂದ ೨೦೦೦ ರೂ. ಮೌಲ್ಯದ (ಬೆಳ್ಳಿ ಹಾಗೂ ಜೆಮ್ಸ್ ಜ್ಯುವೆಲರಿ) ಗಿಫ್ಟ್ ಓಚರ್ ನೀಡಲಾಯಿತು. ಇದರೊಟ್ಟೊಗೆಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ’ ಸ್ಫರ್ಧೆಯಲ್ಲಿ ವಿಜೇತ ೧೦ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.

ಒರೆಗೆ ಹಚ್ಚುವ ಸಾಧನ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸ್ವರ್ಣ ಸಮೂಹ ಸಂಸ್ಥೆಗಳ ಪಾಲುದಾರ ಗುಜ್ಜಾಡಿ ಗೋಪಾಲ ನಾಯಕ, ನಮ್ಮ ಶಾಲಾ, ಕಾಲೇಜು ದಿನಗಳಲ್ಲಿ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸ ಪತ್ರಿಕೆಗಳನ್ನು ಓದಲು ಹವಣಿಸುತ್ತಿದ್ದೆವು. ಆದರೆ, ಇಂದಿನ ಪೀಳಿಗೆ ಮೊಬೈಲ್ ಘೀಳಿಗೆ ಬಿದ್ದು, ಪತ್ರಿಕೆ, ಸಾಹಿತ್ಯ ಓದಿನಿಂದ ದೂರವಾಗಿದೆ. ಮಕ್ಕಳಲ್ಲಿ, ಸಾರ್ವಜನಿಕರಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಸಂಯುಕ್ತ ಕರ್ನಾಟಕ ಲಕ್ಕಿ ಡ್ರಾ ಸೇರಿದಂತೆ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸುತ್ತಿದೆ. ಈ ಮೂಲಕ ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬಹುದಾಗಿದೆ. ಪತ್ರಿಕೆ ಕೇವಲ ಸುದ್ದಿ ಕೊಡುವ ಮಾಧ್ಯಮವಲ್ಲ. ಭಾಷೆ, ಸಂಸ್ಕೃತಿ ಮತ್ತು ಜ್ಞಾನವನ್ನು ಒರೆಗೆ ಹಚ್ಚುವ ಸಾಧನವಾಗಿದೆ ಎಂದರು.
ದತ್ತಾ ಇನ್ಫ್ರಾಸ್ಟ್ರಕ್ಚರ್ ಮಾಲೀಕರಾದ ಪ್ರಕಾಶ ಜೋಶಿ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ದಿನಪತ್ರಿಕೆ, ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳನ್ನು ನಿರಂತರ ಓದುವುದರಿಂದ ಜಗತ್ತಿನ ಆಗು ಹೋಗುಗಳ ಮಾಹಿತಿಯ ಜೊತೆಗೆ ನಮ್ಮ ಜ್ಞಾನದ ಮಟ್ಟವೂ ಹೆಚ್ಚಾಗುತ್ತದೆ. ಜನ ಸಾಮಾನ್ಯರಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಸಂಯುಕ್ತ ಕರ್ನಾಟಕ ಪತ್ರಿಕೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆಯಿಂದಲೂ ಮುಂಬರುವ ದಿನಗಳಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಬಂಟರ್ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ್ ಶೆಟ್ಟಿ ಮಾತನಾಡಿ, ನಮ್ಮ ಬದುಕುವ, ಯೋಚನೆ ಮಾಡುವ ರೀತಿ ಬದಲಾಗದ ಹೊರತು ಮಕ್ಕಳಿಗೆ ಒಳ್ಳೆ ಸಂಸ್ಕಾರ ನೀಡಲು ಸಾಧ್ಯವಿಲ್ಲ. ಮಕ್ಕಳಿಗೆ ಮೊಬೈಲ್ ನೀಡುವುದನ್ನು ಬಿಟ್ಟು ಕಥೆ, ಸಾಹಿತ್ಯ ಪುಸ್ತಕಗಳನ್ನು ನೀಡಿದರೆ ಒಳ್ಳೆಯದ್ದು. ಅವರನ್ನು ಸಭೆ, ಸಮಾರಂಭ ಹಾಗೂ ಅಪರಕರ್ಮ ಕಾರ್ಯಕ್ರಮಗಳಿಗೆ ಕರೆದೊಯ್ಯುವ ಮೂಲಕ ನಮ್ಮ ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ತಿಳಿಸಿಕೊಡಬೇಕು. ಅಜ್ಜಿ ತಾತಂದಿರು ಮಕ್ಕಳಿಗೆ ಪೌರಾಣಿಕ ಸನ್ನಿವೇಶಗಳನ್ನು ಕಥೆಯ ಮೂಲಕ ಹೇಳುವ ಪ್ರಯತ್ನ ಮಾಡಿ ಅವರಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಿಇಓ ಹಾಗೂ ಕಾರ್ಯನಿರ್ವಾಹಕ ಸಂಪಾದಕ ಮೋಹನ ಹೆಗಡೆ, ಜನರಲ್ಲಿ ಓದುವ ಅಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಮೇಲಿಂದ ಮೇಲೆ ಇಂಥ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ಸ್ವರ್ಣ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದು, ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ೯೨ ವರ್ಷಗಳಿಂದ ಜನರಿಗೆ ನಿರಂತರ ಹತ್ತಿರವಾಗಿರುವ ಏಕೈಕ ಪತ್ರಿಕೆ ಸಂಯುಕ್ತ ಕರ್ನಾಟಕ. ಸ್ವಾತಂತ್ರ ಹೋರಾಟ, ಕರ್ನಾಟಕದ ಏಕೀಕರಣದ ವರದಿ ಮಾಡಿದ್ದು, ಧರ್ಮಜಾಗೃತಿ ಮತ್ತು ದೇಶಪ್ರೇಮ ವಿಷಯದಲ್ಲಿ ರಾಜಿ ಮಾಡಿಕೊಳ್ಳದ ಏಕೈಕ ಪತ್ರಿಕೆಯಾಗಿದೆ ಎಂದರು.
ಸಂಯುಕ್ತ ಕರ್ನಾಟಕ ಬಳಗದ ಸಂಧ್ಯಾ ಪಾಟೀಲ ನಿರೂಪಿಸಿದರು. ವಾಣಿ ದೇಸಾಯಿ ಸ್ವಾಗತಿಸಿ, ವಂದಿಸಿದರು. ಹಿರಿಯ ವ್ಯವಸ್ಥಾಪಕ ಸುರೇಶ ಕಾತೋಟಿ, ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ, ಜಾಹೀರಾತು ವಿಭಾಗದ ಮುಖ್ಯಸ್ಥರಾದ ವಿಘ್ನೇಶ ಭಟ್ಟ, ಸುಧೀಂದ್ರ ಹುಲಗೂರ, ಹಣಕಾಸು ವಿಭಾಗದ ಮುಖ್ಯಸ್ಥ ಅಶೋಕ ಶಾನಭಾಗ ಮತ್ತಿತರರು ಇದ್ದರು.

ಸ್ವರ್ಣ ಸಂಭ್ರಮದ ವಿಜೇತರು
ಕಮಲವ್ವ ಕಲ್ಯಾಳ, ಹುಬ್ಬಳ್ಳಿ
ಗುಣಾಸಾ ಲದ್ವಾ, ಹುಬ್ಬಳ್ಳಿ
ವರ್ಷಾ ಗಜಾಕೋಶ, ಧಾರವಾಡ
ಸುಮನ್ ಇರಕಲ್ಲ, ಹುಬ್ಬಳ್ಳಿ
ರೂಪಾ ದಲಬಂಜನ್, ಹುಬ್ಬಳ್ಳಿ
ವಿಜಯಲಕ್ಷ್ಮೀ ಇರಕಲ್ಲ, ಹುಬ್ಬಳ್ಳಿ
ಛಾಯ ಪೋಂಕ್ಷೆ, ಹುಬ್ಬಳ್ಳಿ
ಆತ್ಮಾನಂದ ಗೌರೋಜಿ, ಧಾರವಾಡ
ವಿ.ಎಸ್. ಡುಮ್ಮನವರ, ಧಾರವಾಡ
ಪ್ರೇಮಾ ಕಾಂಬಳೆ, ಧಾರವಾಡ
ವಾಸುಕಿ ಕುಲಕರ್ಣಿ, ಹುಬ್ಬಳ್ಳಿ
ರಾಮದಾಸ್ ಶಾನಭಾಗ್, ಧಾರವಾಡ
ಮಂಜುಳಾ ಕಾಗನೂರು, ಧಾರವಾಡ
ಸುಮಿತ್ರಾ ರಜಪೂತ್, ಹುಬ್ಬಳ್ಳಿ
ಚನ್ನಲಕ್ಷ್ಮೀ ಕುಲಕರ್ಣಿ, ಹುಬ್ಬಳ್ಳಿ
ಮಂಜುಳಾ ಆರೇರ್, ಧಾರವಾಡ,
ನೇತ್ರಾ ಪವಾರ, ಧಾರವಾಡ
ಗಾಯತ್ರಿ ಮೆಹರವಾಡೆ, ಹುಬ್ಬಳ್ಳಿ
ನಾರಾಯಣ ಒಲ್ಲೆಪೂರಕರ್, ಹುಬ್ಬಳ್ಳಿ
ಸುಲೋಚನಾ ಕವಾಲ್. ಹುಬ್ಬಳ್ಳಿ
ಲೀಲಾವತಿ ನರಜ್ಜಿ, ಧಾರವಾಡ
ವಿ.ಎನ್. ವಾಳ್ವೇಕರ, ಧಾರವಾಡ,
ಅಂಬುಜಾ ಬೇವಿನಕಟ್ಟಿ, ಹುಬ್ಬಳ್ಳಿ
ಜೀಜಾಬಾಯಿ ಹವಾಲ್ದಾರ, ಸಾ.ಅಣ್ಣಿಗೇರಿ
ಅಜಯ ಬಿಜಾಪೂರ, ಅದರಗುಂಚಿ

`ಗಣಪನಿಗೆ ಬಣ್ಣ ಹಚ್ಚಿ ಬಹುಮಾನ ಗೆಲ್ಲಿ’ ಸ್ಪರ್ಧೆ ವಿಜೇತರು
ವೇದಾವತಿ ಎಚ್. ದ್ಯಾವನೂರ, ಕೇಶ್ವಾಪುರ ಹುಬ್ಬಳ್ಳಿ
ವೆಂಕಟೇಶ ಎ. ಖಂಡೇಕಾರ, ಗುಲಗಂಜಿಕೊಪ್ಪ ಧಾರವಾಡ
ಪಿಹೂ ಕಬಾಡೆ, ಗಣೇಶನಗರ ಹುಬ್ಬಳ್ಳಿ
ವಾರುಣಿ ಕುಲಕರ್ಣಿ, ಮಹಿಷಿ ರಸ್ತೆ ಧಾರವಾಡ
ಅಬಾ ಪವಾರ, ಅರಿಹಂತನಗರ ಹುಬ್ಬಳ್ಳಿ
ಸಾನ್ವಿ ಯರಗೊಪ್ಪ, ಅರಳಿಕಟ್ಟಿ ಓಣಿ ಹುಬ್ಬಳ್ಳಿ
ಪ್ರಥಮ ಧೋಂಗಡಿ, ಘಂಟಿಕೇರಿ ಹುಬ್ಬಳ್ಳಿ
ಸಹನಾ ಪೂಜಾರ, ಅಕ್ಷಯ ಪಾರ್ಕ್ ಹುಬ್ಬಳ್ಳಿ
ಸಂದೀಪ್ ಕುಲಕರ್ಣಿ, ಶ್ರೀನಗರ ಹುಬ್ಬಳ್ಳಿ
ಅನ್ವಿತಾ ಗುಡುಮಿ, ಗೋಪನಕೊಪ್ಪ ಹುಬ್ಬಳ್ಳಿ

ಸಂಯುಕ್ತ ಕರ್ನಾಟಕ ಪತ್ರಿಕೆ ಏರ್ಪಡಿಸಿದ್ದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ. ಆದರೆ ಬಹುಮಾನ ಬಂದಿರಲಿಲ್ಲ. ಈ ಬಾರಿ ಸ್ವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಪ್ರತಿದಿನವೂ ತಪ್ಪದೇ ಪತ್ರಿಕೆ ಓದುವುದರ ಜೊತೆಗೆ ಅದರಲ್ಲಿನ ಕೂಪನ್‌ಗಳನ್ನು ಸಂಗ್ರಹಿಸಿದ್ದೆ. ಬಹುಮಾನ ಬಂದಿದ್ದಕ್ಕೆ ಸಂತಸವಾಗಿದೆ.

ಅಂಬುಜಾ ಬೇವಿನಕಟ್ಟಿ, ಲಕ್ಕೀ ಡ್ರಾ ವಿಜೇತರು

ಬಹುಮಾನ ಬಾರದಿದ್ದರೂ ಬೇಸರವಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು ಎಂಬ ಸಮಾಧಾನ ನಮ್ಮಲ್ಲಿದೆ. ಕಾರ್ಯಕ್ರಮಕ್ಕೆ ಆಗಮಿಸುವುದರ ಜೊತೆಗೆ ೧೦೦ ವರ್ಷಗಳ ಸಂಭ್ರಮದ ಹೊಸ್ತಿಲಲ್ಲಿರುವ ಸಂಯುಕ್ತ ಕರ್ನಾಟಕ ಪತ್ರಿಕೆಯ ಕಚೇರಿ ನೋಡುವ ಭಾಗ್ಯ ನನ್ನದಾಗಿದೆ. ಸಂಯುಕ್ತ ಕರ್ನಾಟಕ ಪತ್ರಿಕೆ ಆಯೋಜಿಸುವ ಎಲ್ಲ ಸ್ಪರ್ಧೆಗಳಲ್ಲೂ ಭಾಗವಹಿಸುತ್ತೇನೆ.

ಶ್ರೀಧರ ಉಮರ್ಜಿ, ಲಕ್ಕೀ ಡ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರು.

Previous articleಆಡಳಿತ ಕೆಲವರ ಕೈಗೊಂಬೆಯಾಗಿದೆ
Next articleಬಿಜೆಪಿ ಜತೆ ಕುಮಾರಸ್ವಾಮಿ ಕೈ ಜೋಡಿಸಿದ್ದು ಡಿಕೆಶಿ ಜೈಲಿಗೆ ಕಳಿಸಲು…