ಉಡುಪಿ: ಮಣಿಪಾಲ ಬಸ್ ಡಿಕ್ಕಿ, ಮಹಿಳೆ ಸಾವು

0
68

ಉಡುಪಿ: ಮಣಿಪಾಲ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಣಿಪಾಲದ ಈಶ್ವರ ನಗರದಲ್ಲಿ ಬುಧವಾರ ಸಂಜೆ ನಡೆದಿದೆ.
ಮೃತರನ್ನು ನಿವೃತ್ತ ನರ್ಸ್ ವಿನೋದ (70) ಎಂದು ಗುರುತಿಸಲಾಗಿದೆ. ಅವರು ಮೊಮ್ಮಕ್ಕಳನ್ನು ಶಾಲಾ ವಾಹನನಿಂದ ಇಳಿಸಿ ಮನೆಗೆ ಬಿಟ್ಟು ಬಂದಿದ್ದು, ಬಳಿಕ ಉಳ್ಳೂರಿಗೆ ಹೋಗಲು ರಸ್ತೆ ಬದಿ ನಿಂತಿದ್ದಾಗ ಮಣಿಪಾಲದಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಬಸ್ಸಿನಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು.
ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಆಲೂರು ಗ್ರಾಮ ಪಂಚಾಯ್ತಿಆಡಳಿತ ವೈಫಲ್ಯ: ದಿಢೀರ್ ಪ್ರತಿಭಟನೆ
Next articleಲಾರಿ-ಬೈಕ್ ಮಧ್ಯೆ ಅಪಘಾತ: ಸವಾರ ಸಾವು