ಚಿತ್ರದುರ್ಗ: ಚಿತ್ರದುರ್ದಗ ಸಿಬಾರ ಗ್ರಾಮದ ಬಳಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ನಿರ್ಜನ ಪ್ರದೇಶದಲ್ಲಿ ಶಿಶು ಬಿಟ್ಟು ಹೋಗಲಾಗಿದೆ. ತಾಲೂಕಿನ ಸಿಬಾರ ಗ್ರಾಮದ ಬಳಿ ಘಟನೆ ನಡೆದಿದ್ದು, ನವಜಾತ ಶಿಶು ರಕ್ಷಿಸಲಾಗಿದೆ.
ಸದ್ಯ ಮಗುವನ್ನು ಖಾಸಗಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಶಿಶುವನ್ನು ರಕ್ಷಣೆ ಮಾಡಿದ್ದು, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ವಿದ್ಯಾರ್ಥಿನಿ ವರ್ಷಿತಾ ಕೊಲೆ ಅಪ್‌ಡೇಟ್: ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿ ವರ್ಷಿತಾ (19) ಕೊಲೆ ಪ್ರಕರಣದ ಅಪ್‌ಡೇಟ್. ಕಿರಾತಕ ಚೇತನ್ ಕೊಲೆ ಸಂಚು ರಹಸ್ಯ ಬಯಲಾಗಿದೆ. ವರ್ಷಿತಾ, ಚೇತನ್ ಜೊತೆಗಿದ್ದ ಕೊನೆ ಕ್ಷಣದ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ.
2 ಬಾರಿ ಪೆಟ್ರೋಲ್ ಖರೀದಿ ಮಾಡಿರುವುದು, ವರ್ಷಿತಾ ಕರೆದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಲೆ ಸಂಚು ರೂಪಿಸಿ ವರ್ಷಿತಾಳನ್ನು ಚೇತನ್ ಚಿತ್ರದುರ್ಗ ನಗರದ ತುರುವನೂರು ರಸ್ತೆ ಬಳಿಗೆ ಕರೆಸಿದ್ದ.
ವರ್ಷಿತಾ ಬರುವ ಮುನ್ನ ತುರುವನೂರು ರಸ್ತೆಯ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಖರೀದಿ ಮಾಡಿದ್ದ. ಪ್ಯಾಂಟ್ ಜೇಬಿನಲ್ಲಿಯೇ ಪೆಟ್ರೋಲ್ ಬಾಟಲಿ ಇರಿಸಿಕೊಂಡಿದ್ದ. ಪ್ರಿಯಕರನ ಸಂಚು ಅರಿಯದೇ ವರ್ಷಿತಾ ಪ್ರಿಯಕರನ ಬಣ್ಣದ ಮಾತಿಗೆ ಮರಳಾಗಿದ್ದಳು.
ವರ್ಷಿತಾ ಬಂದ ಬಳಿಕ ನಡೆದುಕೊಂಡೇ ಗೋನೂರು ಕಡೆಗೆ ಹೋಗಿದ್ದರು. ಕೊಲೆಗೂ ಮುನ್ನ ವರ್ಷಿತಾ, ಚೇತನ್ ಜೊತೆಯಿದ್ದ ಕೊನೆಯ ವಿಡಿಯೋ ಲಭ್ಯವಾಗಿದೆ. ಗೋನೂರು ಬಳಿಗೆ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿದ್ದ.
ಹಲ್ಲೆ ಮಾಡಿ, ಉಸಿರುಗಟ್ಟಿಸಿ ವರ್ಷಿತಾಳ ಹತ್ಯೆ ಮಾಡಿದ್ದ. ಬಳಿಕ ಪೆಟ್ರೋಲ್ ಹಾಕಿ ಬೆಂಕಿಯಿಟ್ಟಿದ್ದ ಆರೋಪಿ ಚೇತನ್. ಆಗಸ್ಟ್ 18ರ ಮಧ್ಯಾಹ್ನ 4ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು.
ಕೊಲೆ ಬಳಿಕ ಸಂಜೆ ಮತ್ತೆ ಬೈಕಿನಲ್ಲಿ ಹಾಲಿನ ಕ್ಯಾನ್ ಜೊತೆ ಬಂದಿದ್ದ ಚೇತನ್ ನಗರದಲ್ಲಿ ಹಾಲು ಹಾಕಿದ ಬಳಿಕ ಮತ್ತೆ ಪೆಟ್ರೋಲ್ ಖರೀದಿಸಿದ್ದನು. ಮತ್ತೆ ಘಟನಾ ಸ್ಥಳಕ್ಕೆ ತೆರಳಿ ಅರೆಬೆಂದಿದ್ದ ಮೃತ ದೇಹಕ್ಕೆ ಮತ್ತೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದ.
ಚೇತನ್ ಚಲನವಲನ, ಪೆಟ್ರೋಲ್ ಖರೀದಿ, ವರ್ಷಿತಾ ಜತೆಗೆ ತೆರಳಿದ ದೃಶ್ಯ ಲಭ್ಯವಾಗಿದೆ. ಆರೋಪಿ ಚೇತನ್‌ನ ಪ್ರತಿ ಜಾಡು ಹಿಡಿದು ಚಿತ್ರದುರ್ಗ ಡಿವೈಎಸ್ಪಿ ಪಿ.ದಿನಕರ್, ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜ್, ಪಿಎಸ್ ಐ ಸುರೇಶ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.
ಎಟಿಎಂಗೆ ಕನ್ನ: ಚಿತ್ರದುರ್ಗ ನಗರದ ಖಾಸಗಿ ಬಸ್ ನಿಲ್ದಾಣ ಬಳಿ ಎಟಿಎಂಗೆ ಕನ್ನ ಹಾಕಲಾಗಿದೆ. ಸಲಾಕೆಯಿಂದ ಕೆನರಾ ಬ್ಯಾಂಕ್ ಎಟಿಎಂಗೆ ಕನ್ನ ಹಾಕಿದ ಮುಸುಕುಧಾರಿ. ಎಟಿಎಂ ದೋಚಲು ವಿಫಲ ಯತ್ನ ನಡೆಸಲಾಗಿದೆ. ತಡರಾತ್ರಿ ವೇಳೆ ಎಟಿಎಂ ಕಳ್ಳತನಕ್ಕೆ ಯತ್ನಿಸಿ ಕಳ್ಳ. ನಗರ ಠಾಣೆ ಸಿಪಿಐ ಉಮೇಶ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸುತ್ತಿದ್ದು, ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.