RR ನಗರ ಕೈ ಅಭ್ಯರ್ಥಿ ಕುಸುಮಾ, ಡಿಕೆ ಸುರೇಶ್‌ ವಿರುದ್ಧ FIR

0
19
ಕುಸಮಾ

ಬೆಂಗಳೂರು: ಮತದಾರರಿಗೆ ಆಮಿಷ ಒಡ್ಡಿದ ಆರೋಪ ಕುರಿತಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ಹಾಗೂ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ಕ್ಷೇತ್ರದಲ್ಲಿ ಮತದಾರರಿಗೆ ತವಾ ಹಂಚುತ್ತಿದ್ದ ಖಚಿತ ಮಾಹಿತಿ ಪಡೆದು ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದು, ತವಾ ಹಂಚುತ್ತಿದ್ದವರು ಪರಾರಿಯಾಗಿದ್ದಾರೆ. ಆದರೆ ಓರ್ವ ಅಧಿಕಾರಿಗಳ ಕೈ ಸಿಕ್ಕಿಬಿದ್ದಿದ್ದು ವಿಚಾರಣೆ ನಡೆಸಿದ್ದಾರೆ.
ಸ್ಥಳದಲ್ಲಿ ಪತ್ತೆಯಾದ ಬಾಕ್ಸ್​ಗಳ ಮೇಲೆ ಅಭ್ಯರ್ಥಿ ಕುಸುಮಾ ಹಾಗೂ ಡಿ.ಕೆ.ಸುರೇಶ್ ಭಾವಚಿತ್ರ ಕಂಡುಬಂದಿದ್ದು, ಚುನಾವಣಾ ಅಧಿಕಾರಿಗಳು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಧಿಕಾರಿಗಳ ದೂರು ಆಧರಿಸಿ ಕುಸುಮಾ, ಡಿಕೆ ಸುರೇಶ್ ಹಾಗೂ ಜಗದೀಶ್ ಎನ್ನುವವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

Previous articleದಾಖಲೆ ಇಲ್ಲದ 66 ಕೆಜಿ ಬೆಳ್ಳಿ ಸಾಮಾನು ಪತ್ತೆ
Next articleಬಪ್ಪನಾಡು ಜಾತ್ರೆ: ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ