ಹುಬಳ್ಳಿಯಲ್ಲಿ ಝಳುಪಿಸಿದ ತಲ್ವಾರ್: ಹಲವರಿಗೆ ಗಾಯ

0
50

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಮತ್ತೆ ಮಚ್ಚು, ಲಾಂಗುಗಳು ಝಲುಪಿಸಿದ್ದು, ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾದ ಘಟನೆ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಡೆದಿದೆ.
ಶವ ಸಂಸ್ಕಾರಕ್ಕಾಗಿ ಮಂಟೂರು ರಸ್ತೆಯಲ್ಲಿರುವ ಸ್ಮಶಾನಕ್ಕೆ ಶ್ಯಾಮ ಜಾಧವ ಸಹಚರರು ತೆರಳಿದ್ದರು. ಇದೇ ವೇಳೆ ಎಂ.ಡಿ. ದಾವೂದ್ ಸಹೋದರರ ಜೊತೆಗೆ ಮಾತು ಮಾತಿಗೆ ಆರಂಭವಾದ ಜಗಳ ತಾರಕಕ್ಕೇರಿದೆ. ಅಲ್ಲಿಂದ ಎರಡೂ ಕಡೆ ಹುಡುಗರು ಸೇರಿಕೊಂಡು ತಲ್ವಾರ್,
ಬಾಟಲಿಗಳಿಂದ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಕಿಮ್ಸ್ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಬ್ಬರನ್ನು ಒಬ್ಬರು ಗುರಾಯಿಸಿದ್ದಕ್ಕೆ ಘರ್ಷಣೆ ನಡೆದಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದ್ದು, ತನಿಖೆಯಿಂದ ಸತ್ಯ ಹೊರ ಬರಬೇಕಿದೆ. ಸ್ಥಳಕ್ಕೆ ಡಿಸಿಪಿ ಮಹಾನಿಂಗ ನಂದಗಾವಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆನಡೆಸಿದ್ದು, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Previous articleಈಗ `ಕೌನ್ ಬನೇಗಾ (ಕ) ರೋಡ್’ಪತಿ ಸದ್ದು, ವೈರಲ್ ಆದ ರಸ್ತೆ ಗುಂಡಿಗಳು!
Next articleಆ್ಯಪಲ್ ಕಂಪನಿಯ ಸಿಒಒ ಆಗಿ ಭಾರತೀಯ ಮೂಲದ ಸಾಬಿಹ್ ಖಾನ್ ನೇಮಕ