೭ನೇ ತರಗತಿ ವಿದ್ಯಾರ್ಥಿನಿ ಮುಖ್ಯಶಿಕ್ಷಕನಿಂದ ಗರ್ಭಿಣಿ

0
40

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆ ಮುಖ್ಯಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿದ್ದ ೭ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಖ್ಯ ಶಿಕ್ಷಕ ವೆಂಕಟೇಶ್ (೫೫) ನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವು ತಿಂಗಳಿನಿಂದ ವಿದ್ಯಾರ್ಥಿನಿಯಲ್ಲಾದ ದೈಹಿಕ ಬದಲಾವಣೆ ಗಮನಿಸಿದ ಪೋಷಕರು ವೈದ್ಯರ ಬಳಿ ತಪಾಸಣೆಗೆ ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿನಿ ಮೂರು ತಿಂಗಳ ಗರ್ಭಿಣಿಯಾಗಿರುವುದು ತಿಳಿದ ಪೋಷಕರು ಆಕೆಯನ್ನು ಪ್ರಶ್ನಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಮಹಿಳಾ ಅಧಿಕಾರಿಗಳು ಆಪ್ತ ಸಮಾಲೋಚನೆ ನಡೆಸಿದ ವೇಳೆ ಮುಖ್ಯ ಶಿಕ್ಷಕ ವೆಂಕಟೇಶ ಕಳೆದ ಆರು ತಿಂಗಳುಗಳಿಂದ ಶಾಲಾ ಕಚೇರಿ ಕೊಠಡಿಯಲ್ಲಿ ಅತ್ಯಾಚಾರ ಮಾಡಿದ್ದಾಗಿ ವಿದ್ಯಾರ್ಥಿನಿ ಹೇಳಿಕೆ ನೀಡಿದ್ದಾಳೆ. ಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ.

Previous articleಮಿಜೋರಾಂನಲ್ಲಿ ಕಲ್ಲುಗಣಿ ಕುಸಿತ: ೧೬ ಕಾರ್ಮಿಕರ ಸಾವು
Next articleಕನ್ಯಾಕುಮಾರಿಯಲ್ಲಿ ಮೋದಿ ೪೮ಗಂಟೆ ಧ್ಯಾನ