ಹುಬ್ಬಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಚಾಕು ಇರಿತ

0
9
murder

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ತೋಟಗೇರ ಅವರಿಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ವಿದ್ಯಾನಗರ ವ್ಯಾಪ್ತಿಯಲ್ಲಿರುವ ಚಂದ್ರಗಿರಿ ಲೇಔಟ್‌ನಲ್ಲಿರುವ ನಿವಾಸದಲ್ಲಿ ಚಾಕುವಿನಿಂದ ಇರಿಯಲಾಗಿದ್ದು, ಕೈಗೆ ಮತ್ತು ಮೂಗಿನ ಹತ್ತಿರ ಗಾಯವಾದ ಘಟನೆ ನಡೆದಿದೆ. ಮಲ್ಲಿಕಾರ್ಜುನ ತೋಟಗೇರಿ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
ವೈಯಕ್ತಿಕ ವಿಚಾರವಾಗಿ ಅವರ ಆಪ್ತರೊಂದಿಗೆ ಶುಕ್ರವಾರ ಜಗಳ ನಡೆದಿದೆ ಎನ್ನಲಾಗಿದೆ. ಜಗಳ ವಿಕೋಪಕ್ಕೆ ತಿರಿಗಿದ್ದು, ಚಾಕುವಿನಿಂದ ಇರಿಯಲಾಗಿದೆ. ಮಲ್ಲಿಕಾರ್ಜುನ ಅವರನ್ನ ಕಿಮ್ಸ್ ಗೆ ದಾಖಲಿಸಲಾಗಿದೆ‌. ವಿದ್ಯಾನಗರ ಠಾಣೆ ಪೊಲೀಸರು‌ ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಅಮೆರಿಕನ್ನರನ್ನು ಸೆಳೆದ ಕರುನಾಡಿನ ಯಕ್ಷಗಾನ
Next articleಬಿಜೆಪಿಯಿಂದ ಎರಡು ದಾಖಲೆ