ಹಿರಿಯ ವಕೀಲರ ಮೃತದೇಹ ಪತ್ತೆ

0
10

ಮಂಗಳೂರು: ನಗರದ ಹಿರಿಯ ನ್ಯಾಯವಾದಿ ಬಿ. ಹರೀಶ್ ಆಚಾರ್ಯ(60) ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ನಗರದ ಬಿಜೈ ಬಾರೆಬೈಲಿನ ಅವರ ಮನೆಯಲ್ಲಿ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.
ಹರೀಶ್ ಆಚಾರ್ಯ ಜು. 7ರಂದು ನ್ಯಾಯಾಲಯದ ಕಲಾಪಕ್ಕೆ ಹಾಜರಾಗಿದ್ದರು. ಜು. 9 ಅಥವಾ 10ರ ನಡುವೆ ಮನೆಯಲ್ಲಿರುವಾಗ ಹೃದಯಾಘಾತ ಅಥವಾ ಆಕಸ್ಮಿಕವಾಗಿ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ರಕ್ತ ಸಂಬಂಧಿಗಳಿದ್ದರೆ ಸಂಪರ್ಕಿಸುವಂತೆ (೦೮೨೪ ೨೨೨೦೮೨೨, ೨೨೨೦೮೦೦) ಉರ್ವ ಠಾಣಾ ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ವೆನ್‌ಲಾಕ್ ಶವಾಗಾರದಲ್ಲಿರಿಸಲಾಗಿದೆ.

Previous articleಕೊರಗಜ್ಜನ ಗುಡಿಗೆ ಬೆಂಕಿ
Next articleಗ್ರಾಪಂ-ನಗರಸಭಾ ‘ನಕಲಿ’ ದಾಖಲೆಗಳ ಸೃಷ್ಟಿ: ಓರ್ವ ವಶಕ್ಕೆ