ಹಿಂಡಲಗಾ ಕಾರಾಗೃಹದ ಇಬ್ಬರು ಸಿಬ್ಬಂದಿ ಅಮಾನತು

0
12

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಕಾರಾಗೃಹದ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಹೆಡ್ ವಾರ್ಡರ್ ಬಿ.ಎಲ್. ಮೆಳವಂಕಿ, ವಾರ್ಡರ್ ವಿ.ಟಿ. ವಾಘ್ಮೋರೆ ಅಮಾನತುಗೊಂಡವರು. ಉತ್ತರ ವಲಯದ ಕಾರಾಗೃಹ ಉಪಮಹಾನಿರೀಕ್ಷಕ ಟಿ.ಪಿ. ಶೇಷ ಈ ಸಂಬಂಧ ಆದೇಶ ಹೊರಡಿಸಿದ್ದಾರೆ.
ಜೈಲಿನಲ್ಲಿ ಕೈದಿಗಳಿಗೆ ಕಿರುಕುಳ ನೀಡುವುದು, ಹಣ ಕೊಟ್ಟ ಕೈದಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ ನೀಡಿದ ಆರೋಪವನ್ನು ಅಮಾನತುಗೊಂಡವರು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಕೈದಿಗಳಿಂದ ಪರಸ್ಪರ ಹಲ್ಲೆ ಪ್ರಕರಣ ಕೂಡ ನಡೆದಿತ್ತು. ಈ ಎಲ್ಲ ವಿಚಾರಗಳ ಬಗ್ಗೆ `ಸಂಯುಕ್ತ ಕರ್ನಾಟಕ’ ವಿಶೇಷ ವರದಿ ಪ್ರಕಟಿಸಿತ್ತು.
ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಪರಿಗಣಿಸಿ ಅಮಾನತು ಆದೇಶ ಹೊರಡಿಸಲಾಗಿದೆ. ಈ ವೇಳೆ ಜೈಲಿನ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಪ್ರಾಥಮಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಕಾರಾಗೃಹ ಉಪಮಹಾನಿರೀಕ್ಷಕ ಉತ್ತರ ವಲಯದ ಟಿ.ಪಿ. ಶೇಷ ಅವರಿಗೆ ಸೂಚಿಸಿದ್ದರು.

Previous articleಟಗ್ ಬೋಟ್‌ಗೆ ಬೆಂಕಿ
Next articleಅವಿಶ್ವಾಸ ನಿರ್ಣಯದಲ್ಲಿ ಮೋದಿ ಸರ್ಕಾರಕ್ಕೆ ಗೆಲುವು