ಹಾಡಹಗಲೇ ಪಂಜಾಬ್‌ನಲ್ಲಿ ಶಿವಸೇನಾ ಮುಖಂಡನ ಗುಂಡಿಕ್ಕಿ ಹತ್ಯೆ

0
16
SUDIR SURI

ಅಮೃತಸರ (ಪಂಜಾಬ್​): ಪಂಜಾಬ್​ನ ಅಮೃತಸರದಲ್ಲಿ ಹಾಡಹಗಲೇ ಶಿವಸೇನೆ ಹಿಂದೂಸ್ತಾನ್ ಮುಖ್ಯಸ್ಥ ಸುಧೀರ್ ಸೂರಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಶುಕ್ರವಾರ ಭಾಷಣ ಮಾಡುತ್ತಿದ್ದಾಗಲೇ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸೂರಿ ವಿರೋಧಿಗಳ ಟಾರ್ಗೆಟ್ ಲಿಸ್ಟ್‌ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೂರಿ ಮತ್ತು ಪಕ್ಷದ ಇತರ ಕೆಲವು ಮುಖಂಡರು ಗೋಪಾಲ ಮಂದಿರದ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸೂರಿ ಮೇಲೆ ಗುಂಡಿನ ದಾಳಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಬದುಕುಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದಾಳಿಕೋರನನ್ನು ಬಂಧಿಸಲಾಗಿದೆ. ಆತನಿಂದ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Previous articleಚಂದ್ರು ಸಾವು ನೋವು ತಂದಿದೆ: ತನಿಖೆ ನಡೆಸುತ್ತೇವೆ: ಬಿಎಸ್‌ವೈ
Next articleಸಮಗ್ರ ತನಿಖೆ ನಡೆಸಿ ಸತ್ಯ ಬಯಲಿಗೆಳೆಯುತ್ತೇವೆ: ಎಡಿಜಿಪಿ ಅಲೋಕ್ ಕುಮಾರ್