ಹಳ್ಳಕ್ಕೆ ಬಿದ್ದ ಬೊಲೆರೊ ವಾಹನ: ಓರ್ವ ಸಾವು, 7 ಜನ ಗಂಭೀರ

0
19

ನಾಗಮಂಗಲ: ಬೊಲೆರೊ ವಾಹನವೊಂದು ರಸ್ತೆ ಬದಿಯ ಹಳ್ಳಕ್ಕೆ ಬಿದ್ದು ಓರ್ವ ಸಾವನ್ನಪ್ಪಿದ್ದು, ಏಳು ಜನ ಗಂಭೀರ ಗಾಯಗೊಂಡ ಘಟನೆ ನಾಗಮಂಗಲ ತಾಲ್ಲೂಕಿನ ಪಿ. ನೇರಲಕೆರೆ ಗ್ರಾಮದ ಸಮೀಪ ಇಂದು ಸಂಜೆ ಸಂಭವಿಸಿದೆ.
ನಾಗಮಂಗಲ ತಾಲ್ಲೂಕಿನ ಕಸಬಾ ಹೋಬಳಿ ಪಾಲಗ್ರಹಾರ ಗ್ರಾಮದ ಶಾಂತಕುಮಾರ್(45) ಎಂಬಾತನೇ ಮೃತ ದುರ್ದೈವಿ. ಪಾಲಗ್ರಹಾರದಿಂದ ಮಲ್ಲಸಂದ್ರ ಗ್ರಾಮದ ಹಬ್ಬಕ್ಕೆಂದು ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ವಾಹನ ಉರುಳಿದೆ. ಪಾಲಗ್ರಹಾರ ಗ್ರಾಮದ ಮಂಜುನಾಥ್, ಜಗದೀಶ್, ಪುಟ್ಟಸ್ವಾಮಿ ಮತ್ತು ಮಣಿಯಮ್ಮ ಸೇರಿದಂತೆ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.
ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಿಜಿ ನಗರದ ಏಮ್ಸ್ ಆಸ್ಪತ್ರೆಗೆ ಗಾಯಾಳುಗಳ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleವಿವಿಧ ನಗರಗಳಿಗೆ ಏಕಮಾರ್ಗದ ವಿಶೇಷ ರೈಲುಗಳ ಸಂಚಾರ
Next articleಗೊಬ್ಬರ ಅಂಗಡಿಗೆ ಬೆಂಕಿ: ೨೦ ಲಕ್ಷ ರೂ.ಅಧಿಕ ಹಾನಿ