ಹನಿಟ್ರ್ಯಾಪ್‌ಗೆ ವೃದ್ಧನ ಟಾರ್ಗೆಟ್‌: ಮಹಿಳೆ ಬಂಧನ

0
14
Honeytrap

ದಾವಣಗೆರೆ: ದಾವಣಗೆರೆ: ಕೊಟ್ಟ ಸಾಲವನ್ನು ವಾಪಸ್ ಕೇಳಿದ 79 ವರ್ಷ ವಯಸ್ಸಿನ ವೃದ್ಧನನ್ನು ಮಹಿಳೆಯೋರ್ವಳು ಹನಿಟ್ರ್ಯಾಪ್‌ಗೆ ಕೆಡವಲು ಮುಂದಾಗಿ ಕಂಬಿ ಹಿಂದೆ ಹೋಗಿರುವ ಘಟನೆ ನಗರದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿಯಾಗಿರುವ ಎನ್. ಚಿದಾನಂದಪ್ಪ (79) ಇವರು ಸರಸ್ವತಿ ನಗರದಲ್ಲಿರುವ ಜಿ.ಕೆ. ಯಶೋಧ (32) ಎಂಬುವವರು ಈ ವೃದ್ಧರಿಗೆ ಪರಿಚಯವಾದ ಕಾರಣ. ಆಕೆಗೆ 85 ಸಾವಿರ ರು., ಸಾಲವನ್ನು ನೀಡಿದ್ದರು. ಹಲವು ದಿನಗಳ ಬಳಿಕ ಕೊಟ್ಟ ಸಾಲವನ್ನು ವಾಪಸ್ ಕೊಡುವಂತೆ ಕೇಳಿದಾಗ ಆಕೆ ಹಣ ಕೊಡಲು ಸತಾಯಿಸಿದ್ದಾಳೆ.
ಹಣ ಕೊಡುವಂತೆ ಒತ್ತಡ ಹೇರಿದಾಗ, ಹಣ ಕೊಡುವುದಾಗಿ ಹೇಳಿ ಚಿದಾನಂದಪ್ಪ ಅವರನ್ನು ತನ್ನ ಮನೆಗೆ ಕರೆಯಿಸಿಕೊಂಡ ಮಹಿಳೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಹಾಕಿಕೊಟ್ಟು, ವೃದ್ಧನನ್ನು ನಗ್ನಗೊಳಿಸಿ, ವೃದ್ಧನೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದು, ನಂತರ 15 ಲಕ್ಷ ಹಣ ನೀಡದಿದ್ದರೆ ಆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾಳೆ.
ಈ ವಿಷಯದಿಂದ ಗಾಬರಿಗೊಂಡ ವೃದ್ಧ ಚಿದಾನಂದಪ್ಪ ಅವರು ತಮ್ಮ ಪುತ್ರನಿಗೆ ವಿಷಯ ತಿಳಿಸಿದಾಗ ಅವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

Previous articleಅಡ್ವಾಣಿ ಜನ್ಮದಿನ: ನಿವಾಸಕ್ಕೆ ತೆರಳಿ ಶುಭ ಹಾರೈಸಿದ ಮೋದಿ
Next articleಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ಕೊಳಕು ಮನಸ್ಸಿನ ಮನಸ್ಥಿತಿ: ಬಸವರಾಜ ಬೊಮ್ಮಾಯಿ