ಹಣ್ಣಿನ ಅಂಗಡಿ ಹೊಕ್ಕ ಕಾರ: ಗಾಯಾಳುಗಳಿಗೆ ಸ್ಪಂದಿಸಿದ ಜೋಶಿ

0
19

ಹುಬ್ಬಳ್ಳಿ: ಧಾರವಾಡ ಕೃಷಿ ವಿವಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ಕಂಡು ತಕ್ಷಣವೇ ಸ್ಪಂದಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾನವೀಯತೆ ಮೆರೆದಿದ್ದಾರೆ.
ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಬೆಳಗಾವಿಗೆ ಸಾಗುವ ವೇಳೆ ಮಾರ್ಗ ಮಧ್ಯೆ ಕಾರೊಂದರ ಅಪಘಾತ ಕಂಡಿದೆ. ತಕ್ಷಣ ಸಚಿವರು ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಸ್ಪಂದಿಸಿದ್ದಾರೆ.
ಅಲ್ಲದೆ ತಮ್ಮ ಬೆಂಗಾವಲು ವಾಹನ ಹಾಗೂ 108 ಆಂಬ್ಯುಲೆನ್ಸ್ ತರಿಸಿ ತಕ್ಷಣ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಾರೆ.

ಧಾರವಾಡದ ಕೃಷಿ ವಿವಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹಣ್ಣಿನ ಅಂಗಡಿಗೆ ನುಗ್ಗಿದೆ. ಪರಿಣಾಮ ಗ್ರಾಹಕನೊಬ್ಬ ಮೃತಪಟ್ಟಿದ್ದು, ಮೂವರು ತೀವ್ರ ಗಾಯಗೊಂಡಿದ್ದರು.

Previous articleಹುಬ್ಬಳ್ಳಿಯ ಶಿಕ್ಷಕಿಗೆ ಬೆದರಿಕೆ ಪತ್ರ: ನೇಹಾ, ಅಂಜಲಿ ಹಾಗೆಯೇ ನಿನ್ನ ಹತ್ಯೆ ಆಗುತ್ತೆ
Next articleರಸ್ತೆ ಮಧ್ಯೆ ಸ್ಪ್ರೈಟ್…