ಸಿಪಿಐ ಮೇಲೆ ಹಲ್ಲೆ ಪ್ರಕರಣ: 8 ಜನರ ಬಂಧನ

0
17
ಪೊಲೀಸರ ಮೇಲೆ ದಾಳಿ

ಬೆಂಗಳೂರು: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ತುರೂರಿ ಸಮೀಪದ ವಾಡಿ ಹಾಗೂ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬಸವಕಲ್ಯಾಣ ತಾಲೂಕಿನ ಹೊನ್ನಳಿಯ ಜಮೀನಿನಲ್ಲಿ ಶುಕ್ರವಾರ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೆ ಸುಮಾರು 40 ಜನ ಗುಂಪಾಗಿ ಬಂದ ದುಷ್ಕರ್ಮಿಗಳು ಹಲ್ಲೆಗೈದ ಪ್ರಕರಣದಲ್ಲಿ, ಕಸಿದುಕೊಂಡಿದ್ದ ಸೇವಾ ರಿವಾಲ್ವೋರ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಎಂಟು ಜನರನ್ನೂ ಪೊಲೀಸರು ಬಂಧಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣದ ಸಂದರ್ಭದಲ್ಲಿ ಸಿಪಿಐ ಶ್ರೀಮಂತ ಇಲ್ಲಾಳ ಗಂಭೀರ ಗಾಯಗೊಂಡಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ, ಆದರೆ ಇನ್ನೂ ಪ್ರಜ್ಞಾ ಸ್ಥಿತಿಗೆ ಬಂದಿಲ್ಲ ಎಂದು ಚಿಕಿತ್ಸೆ ಮುಂದುವರೆಸಿರುವ, ವೈದ್ಯರು ತಿಳಿಸಿದ್ದಾರೆ.
ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು, ಕಲಬುರಗಿ ಆಸ್ಪತ್ರೆಯಿಂದ, ಹೆಚ್ಚಿನ ಚಿಕಿತ್ಸೆಗೆ, ಏರ್ ಆಂಬುಲೆನ್ಸ್ ಮುಖಾಂತರ, ಬೆಂಗಳೂರಿಗೆ, ಸ್ಥಳಾಂತರಿಸಲಾಗಿತ್ತು.

Previous articleಸಿದ್ದು ಡಿಎನ್ಎ ಪರೀಕ್ಷಿಸಬೇಕು: ಮುತಾಲಿಕ್
Next articleಕೋಲಾರ: 7 ಜನ ಪಿಎಫ್‌ಐ ಮುಖಂಡರ ಬಂಧನ