ಸಹೋದರರ ವೈಮನಸ್ಸು : ಗುಂಡಿನ ದಾಳಿ

0
19
ಗುಂಡಿನ ದಾಳಿ

ಬೆಳಗಾವಿ: ಕಬ್ಬು ಕಟಾವು ವಿಷಯದಲ್ಲಿ ಸಹೋದರರ ನಡುವೆ ಇದ್ದ ವೈಮನಸ್ಸು ಭುಗಿಲೆದ್ದು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ರಾಯಭಾಗ ತಾಲ್ಲೂಕಿನ ಸವಸುದ್ದಿ ಗ್ರಾಮದಲ್ಲಿ ನಡೆದಿದೆ.
ಶ್ರೀಶೈಲ ಬಾಳಗೌಡ ಪಾಟೀಲ ಎಂಬುವನೇ ಗುಂಡು ಹಾರಿಸಿದ ವ್ಯಕ್ತಿಯಾಗಿದ್ದು, ಎರಡು ಸುತ್ತು ಗುಂಡು ಹಾರಿಸಿದ ಬಗ್ಗೆ ತಿಳಿದುಬಂದಿದೆ. ಸಹೋದರನ ಗುಂಡಿನಿಂದ ಗಾಯಗೊಂಡಿರುವ ಶ್ರೀಶೈಲ ಪಾಟೀಲನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾರೂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

Previous articleಪಿಎಸ್‌ಐ ಅಕ್ರಮ ನೇಮಕಾತಿ ಹಗರಣ ಸರ್ಕಾರದಿಂದ ಮುಚ್ಚಿ ಹಾಕುವ ಪ್ರಯತ್ನ: ಎಚ್‌ಡಿಕೆ ಆರೋಪ
Next articleಮಂಗಳೂರು ಡ್ರಗ್ ಕೇಸ್: ಸೂಕ್ತ ತನಿಖೆಗೆ ಆಗ್ರಹ