ಶಾಲಾ ಬಸ್-ಬೈಕ್ ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು, ಓರ್ವ ಗಂಭೀರ

0
18

ಮಂಗಳೂರು(ಮಂಜೇಶ್ವರ): ಮೀಯಪದವು ಸಮೀಪದ ಬಾಳಿಯೂರು ಬಳಿ ಶಾಲಾ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತ ಪಟ್ಟು ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡ ಘಟನೆ ಜರುಗಿದೆ.
ಮೃತರನ್ನು ಮೀಯಪದವು ದರ್ಬೆಯ ಪ್ರಿತೇಶ್ ಶೆಟ್ಟಿ(೨೧), ಬೆಜ್ಜದ ಅಭಿಷೇಕ್ ಭಂಡಾರಿ(೨೧) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಮೀಯಪದವು ಚಿಗುರು ಪಾದೆಯ ನವಿತ್(೨೧) ಎಂಬಾತ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳನ್ನು ಕರೆದೊಯುತ್ತಿದ್ದ ಉಪ್ಪಳದ ಖಾಸಗಿ ಶಾಲೆಯ ಬಸ್ಸಿಗೆ ಇವರು ಸಂಚರಿಸಿದ ಬೈಕ್ ಡಿಕ್ಕಿ ಹೊಡೆದಿದೆ. ಈ ಕುರಿತು ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಕಾಂಗ್ರೆಸ್ ಬಸ್ ಯಾತ್ರೆ ಪಂಚರ್: ರವಿಕುಮಾರ್
Next articleಆದಿಯೋಗಿ ಪ್ರತಿಮೆ ಅನಾವರಣಕ್ಕೆ ಅನುಮತಿ